ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಪರಿಷ್ಕರಣೆ ಮಾಡಿವೆ.
ಎರಡು ದಿನಗಳ ನಂತರ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 26 ಪೈಸೆ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 33 ಪೈಸೆಯಷ್ಟು ಹೆಚ್ಚಳವಾಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ ದರ 91.53 ರೂಪಾಯಿ, ಡೀಸೆಲ್ ದರ 82.06 ರೂಪಾಯಿ ಇದೆ.
ದೆಹಲಿಯಲ್ಲಿ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರದ ತೆರಿಗೆ 32.98 ರೂ., ರಾಜ್ಯ ಸರ್ಕಾರದ ವ್ಯಾಟ್ 19.55 ರೂಪಾಯಿ ಇದೆ. ಡೀಸೆಲ್ ಗೆ ಕೇಂದ್ರ ಅಬಕಾರಿ ತೆರಿಗೆ 31.83 ರೂಪಾಯಿ ಮತ್ತು ವ್ಯಾಟ್ 10.99 ರೂಪಾಯಿ ಇದೆ. ಇದರೊಂದಿಗೆ ಡೀಲರ್ ಕಮಿಷನ್ ಪೆಟ್ರೋಲ್ ಗೆ 2.6 ರೂಪಾಯಿ, ಡೀಸೆಲ್ 2 ರೂ. ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ಏಪ್ರಿಲ್ ಮತ್ತು ಮೇ ನಲ್ಲಿ ಕೊರೋನಾ ಎರಡನೇ ಅಲೆ ಕಾರಣ ಇಂಧನ ಮಾರಾಟ ಕುಂಠಿತವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಪ್ರತಿ ಲೀಟರ್ ಗೆ ಮುಂಬೈನಲ್ಲಿ 97.86 ರೂ., 89.17 ರೂ., ಚೆನ್ನೈ 93.38 ರೂ., 86.96 ರೂ., ಕೊಲ್ಕೊತ್ತಾ 91.66 ರೂ., 84.90 ರೂ. ಇದೆ.