ನವದೆಹಲಿ: ನಿರೀಕ್ಷೆ ನಿಜವಾಗಿದ್ದು, 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 15 ಪೈಸೆ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 16 ಪೈಸೆ ಹೆಚ್ಚಳ ಮಾಡಲಾಗಿದೆ. ಈಗ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.40 ರೂಪಾಯಿ ಮತ್ತು ಡೀಸೆಲ್ ಲೀಟರ್ ಗೆ 80.73 ರೂಪಾಯಿ ದರ ಇದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 21.58 ರೂ., ಡೀಸೆಲ್ ಲೀಟರ್ಗೆ 19.18 ರೂ. ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರದ ತೆರಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 32.98 ರೂಪಾಯಿ, ಮಾರಾಟ ತೆರಿಗೆ ಅಥವಾ ರಾಜ್ಯ ಸರ್ಕಾರದ ವ್ಯಾಟ್(ಮೌಲ್ಯವರ್ಧಿತ ತೆರಿಗೆ) 19.55 ರೂಪಾಯಿ ಇದೆ. ಡೀಸೆಲ್ ಗೆ ಕೇಂದ್ರ ಸುಂಕ 31.83 ಮತ್ತು ರಾಜ್ಯದ ವ್ಯಾಟ್ 10.99 ರೂ. ಇದ್ದು, ಇದರ ಜೊತೆಗೆ ಡೀಲರ್ ಕಮಿಷನ್ ಪೆಟ್ರೋಲ್ ಗೆ 2.6 ರೂ., ಡೀಸೆಲ್ ಗೆ 2 ರೂ.ನಷ್ಟು ಇದೆ ಎಂದು ಹೇಳಲಾಗಿದೆ.
ಬೆಲೆ ಏರಿಕೆ ನಂತರ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ದೆಹಲಿಯಲ್ಲಿ 90.55 ರೂ., 80.91 ರೂ., ಮುಂಬೈ 96.95 ರೂ., 87.98 ರೂ., ಚೆನ್ನೈ 92.55 ರೂ., 85.90 ರೂ., ಕೊಲ್ಕೊತ್ತಾ 90.76 ರೂ., 83.78 ರೂ. ದರ ಇದೆ.