ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶುಕ್ರವಾರ 35 ಪೈಸೆ ಏರಿಕೆ ಕಂಡ ನಂತರ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.
ಪೆಟ್ರೋಲ್ ಬೆಲೆ 35 ಪೈಸೆ ಏರಿಕೆಯಾಗಿ 106.89 ರೂ. ತಲುಪಿದೆ. ಡೀಸೆಲ್ ಬೆಲೆ ಕೂಡ 35 ಪೈಸೆ ಏರಿಕೆಯಾಗಿದ್ದು, 95.62 ರೂ. ತಲುಪಿದೆ.
ಮುಂಬೈನಲ್ಲಿ, ಪೆಟ್ರೋಲ್ ಬೆಲೆ 112.78 ರೂ.ನಷ್ಟಿದ್ದರೆ, ಡೀಸೆಲ್ ಬೆಲೆ 103.63 ರೂ.ಗೆ ತಲುಪಿದೆ.
ದೆಹಲಿ ಪೆಟ್ರೋಲ್ 106.89 ರೂ., ಡೀಸೆಲ್ 95.62 ರೂ.
ಕೋಲ್ಕತ್ತಾ ಪೆಟ್ರೋಲ್ 107.45 ರೂ., ಡೀಸೆಲ್ 98.73 ರೂ.
ಚೆನ್ನೈ ಪೆಟ್ರೋಲ್ 103.92 ರೂ., ಡೀಸೆಲ್ 99.92 ರೂ.
ಇಂಧನ ದರಗಳನ್ನು ದೇಶಾದ್ಯಂತ ಪ್ರತಿದಿನ ಪರಿಷ್ಕರಿಸಲಾಗುತ್ತದೆ. ತೈಲ ಕಂಪನಿಗಳು ಬೆಳಿಗ್ಗೆ 6 ಗಂಟೆಗೆ ದರ ಪ್ರಕಟಿಸುತ್ತವೆ. ಕಚ್ಚಾ ತೈಲದ ಬೆಲೆ, ಸಂಸ್ಕರಣಾಗಾರಗಳ ಬಳಕೆ ಅನುಪಾತ ಮತ್ತು ಸರ್ಕಾರದಿಂದ ಇಂಧನದ ಮೇಲೆ ವಿಧಿಸಲಾದ ವ್ಯಾಟ್ ಮತ್ತು ತೆರಿಗೆಗಳಿಂದಾಗಿ ಇಂಧನದ ಬೆಲೆಗಳು ಏರಿಳಿತವಾಗಲಿವೆ.