ನವದೆಹಲಿ: ಸತತ ನಾಲ್ಕನೇ ದಿನವೂ ಪ್ರತಿ ಲೀಟರ್‌ಗೆ ತಲಾ 35 ಪೈಸೆಗಳಷ್ಟು ಏರಿಕೆಯಾದ ನಂತರ ಶನಿವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 35 ಪೈಸೆ ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಕ್ರಮವಾಗಿ ಲೀಟರ್‌ಗೆ 107.24 ರೂ. ಮತ್ತು 95.97 ರೂ.ಗೆ ಏರಿಕೆಯಾಗಿದೆ.
ಮುಂಬೈನಲ್ಲಿ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 113.12 ರೂ. ಇದೆ ಮತ್ತು ಡೀಸೆಲ್ ಲೀಟರ್‌ಗೆ 104.00 ರೂ.ಗೆ ತಲುಪಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 107.78 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 99.08 ರೂ.ಗೆ ತಲುಪಿದೆ.
ಚೆನ್ನೈನಲ್ಲಿ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 104.22 ರೂ. ಮತ್ತು ಡೀಸೆಲ್‌ಗೆ ಲೀಟರ್‌ಗೆ 100.25 ರೂ. ತಲುಪಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 110.98 ರೂ. ಮತ್ತು ಡೀಸೆಲ್ 101.86 ರೂ. ಇದೆ.
ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ ತಕ್ಷಣಕ್ಕೆ ಇಳಿಯುವುದಿಲ್ಲ. ತೈಲಗಳ ಪೂರೈಕೆ ಮತ್ತು ಬೇಡಿಕೆಯ ವಿಷಯದ ಕುರಿತು ಕೇಂದ್ರ ಸರ್ಕಾರವು ಹಲವಾರು ತೈಲ-ರಫ್ತು ಮಾಡುವ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಆದರೆ ಬೆಲೆಯಲ್ಲಿ ತಕ್ಷಣದ ಪರಿಹಾರದ ಸಾಧ್ಯತೆಯಿಲ್ಲ.
ರಾಜಸ್ಥಾನದ ಗಂಗಾನಗರದಲ್ಲಿ ತೈಲ ದರ ಅತ್ಯಂತ ದುಬಾರಿಯಾಗಿದ್ದು, ಪೆಟ್ರೋಲ್ 119.42 ರೂ.ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 110.26 ರೂ. ಇದೆ.
ಸ್ಥಳೀಯ ತೆರಿಗೆಗಳ ಸಂಭವವನ್ನು ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ದರ ಪರಿಷ್ಕರಣೆಯಲ್ಲಿ ಮೂರು ವಾರಗಳ ಅವಧಿಯ ವಿರಾಮ ಕೊನೆಗೊಂಡ ಸೆಪ್ಟೆಂಬರ್ 28 ರಿಂದ ಪೆಟ್ರೋಲ್ ಬೆಲೆಯನ್ನು 19 ಬಾರಿ ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ ಲೀಟರ್‌ಗೆ 5.7 ರೂ. ನಷ್ಟು ಏರಿಕೆಯಾಗಿದೆ.
ಸೆಪ್ಟೆಂಬರ್ 24 ರಿಂದ 22 ಏರಿಕೆಗಳಲ್ಲಿ ಡೀಸೆಲ್ ದರವನ್ನು ಲೀಟರ್‌ಗೆ 7 ರೂ. ಹೆಚ್ಚಿಸಲಾಗಿದೆ.
ಅದಕ್ಕೂ ಮೊದಲು, ಮೇ 4 ರಿಂದ ಜುಲೈ 17 ರ ನಡುವೆ ಪೆಟ್ರೋಲ್ ಬೆಲೆಯನ್ನು 11.44 ರೂ. ಹೆಚ್ಚಿಸಲಾಗಿದೆ. ಈ ಅವಧಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ 19.14 ರಷ್ಟು ಏರಿಕೆಯಾಗಿತ್ತು.