ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕೂಡ ಏರಿಕೆಯಾಗಿದೆ. ಕಳೆದ ಎರಡು ವಾರದಲ್ಲಿ 12 ನೇ ಬಾರಿಗೆ ತೈಲ ದರ ಏರಿಕೆ ಕಂಡಿದೆ. 14 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ 8.40 ರೂಪಾಯಿ ಏರಿಕೆಯಾಗಿದೆ.
ಇವತ್ತು ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 40 ಪೈಸೆ ಏರಿಕೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಪ್ರತಿದಿನ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
ಸೋಮವಾರ ಪ್ರತಿ ಲೀಟರ್ಗೆ ಪ್ರತಿ ಲೀಟರ್ ಗೆ 40 ಪೈಸೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗುವುದರೊಂದಿಗೆ ಇಂಧನ ಬೆಲೆಗಳು ಏರಿಕೆಯ ಪ್ರವೃತ್ತಿ ಮುಂದುವರೆಸಿವೆ. ಇದುವರೆಗಿನ 14 ದಿನಗಳಲ್ಲಿ 14 ಪರಿಷ್ಕರಣೆಗಳಲ್ಲಿ ಲೀಟರ್ ಗೆ ಸುಮಾರು 8.40 ರೂ. ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ, ಪೆಟ್ರೋಲ್ ಬೆಲೆ ಈಗ ಲೀಟರ್ಗೆ 103.81 ರೂ. ಆಗಿದ್ದು, ಡೀಸೆಲ್ ಪ್ರತಿ ಲೀಟರ್ ಗೆ 95.07 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದು 118.83 ರೂ.ಮತ್ತು ಡೀಸೆಲ್ ಬೆಲೆ ಲೀಟರ್ ಗೆ 43 ಪೈಸೆ ಏರಿಕೆಯಾಗಿ 103.07 ರೂ. ಆಗಿದೆ.