
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶುಕ್ರವಾರ ದೇಶಾದ್ಯಂತ ಮತ್ತೆ ಏರಿಸಲಾಗಿದೆ, ಇದು ಎರಡು ದಿನಗಳ ವಿರಾಮದ ನಂತರ ಸತತ ಎರಡನೇ ಏರಿಕೆಯಾಗಿದೆ.
ರಾಷ್ಟ್ರೀಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆಯಾಗಿ 105.14 ರೂ.ಗೆ ತಲುಪಿದೆ. ಡೀಸೆಲ್ ಬೆಲೆ ಕೂಡ 35 ಪೈಸೆಯಷ್ಟು ಏರಿಕೆಯಾಗಿದ್ದು, ಲೀಟರ್ ಗೆ 93.87 ರೂ. ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 34 ಪೈಸೆ ಹೆಚ್ಚಳ ಮಾಡಿದ್ದು 111.09 ರೂ.ಗೆ ತಲುಪಿದೆ. ಡೀಸೆಲ್ ದರವನ್ನು 37 ಪೈಸೆ ಹೆಚ್ಚಳವಾಗಿದ್ದು, 101.78 ರೂ.ಗೆ ತಲುಪಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 108.80 ರೂ. ಮತ್ತು ಡೀಸೆಲ್ 99.63 ರೂ. ಆಗಿದೆ.
ಎರಡು ವಾರಗಳಲ್ಲಿ ಪೆಟ್ರೋಲ್ ಬೆಲೆಯನ್ನು ಏರಿಸಿದ್ದು ಇದು 14 ನೇ ಬಾರಿ. ಆದರೆ ಡೀಸೆಲ್ ದರ ಮೂರು ವಾರಗಳಲ್ಲಿ 17 ಪಟ್ಟು ಹೆಚ್ಚಾಗಿದೆ.
ತೈಲ ಕಂಪನಿಗಳು ಕಳೆದ ವಾರ ಆಟೋ ಇಂಧನ ಬೆಲೆಯನ್ನು ಹೆಚ್ಚಿಸಲು ಆರಂಭಿಸಿದವು. ಏಳು ದಿನಗಳ ಸತತ ಏರಿಕೆಯ ನಂತರ ಅಕ್ಟೋಬರ್ 12 ಮತ್ತು 13 ರಂದು ವಿರಾಮ ನೀಡಲಾಗಿತ್ತು. ಸ್ಥಳೀಯ ತೆರಿಗೆಗಳ ಅವಲಂಬಿಸಿ ತೈಲ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 84 ಡಾಲರ್‌ಗೆ ಏರಿಕೆಯಾಗಿದೆ. ಸೆಪ್ಟೆಂಬರ್ 13 ರಂದು, ಬ್ರೆಂಟ್ ಕಚ್ಚಾತೈಲ ದರ 73.51 ಡಾಲರ್ ಇತ್ತು.