
ನವದೆಹಲಿ: ಸತತ 7 ನೇ ದಿನವಾದ ಸೋಮವಾರವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 0.30 ರೂ. ಮತ್ತು 0.35 ರೂ. ಹೆಚ್ಚಳವಾಗಿವೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 104.44 ರೂ., ಡೀಸೆಲ್ ಲೀಟರ್ ಗೆ 93.17 ರೂ.ಗೆ ತಲುಪಿದೆ.
ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ 29 ಪೈಸೆ ಹೆಚ್ಚಳವಾಗಿ 110.41 ರೂ.ತಲುಪಿದೆ. ಡೀಸೆಲ್ ದರ 37 ಪೈಸೆಯಷ್ಟು ಹೆಚ್ಚಳವಾಗಿ 101.03 ರೂ. ತಲುಪಿದೆ.