ನವದೆಹಲಿ: ಸೋಮವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಿದ್ದ ತೈಲಕಂಪನಿಗಳು ಮಂಗಳವಾರವೂ ಇಂಧನ ಬೆಲೆಯನ್ನು ಹೆಚ್ಚಳ ಮಾಡಿವೆ.
ಪ್ರತಿ ಲೀಟರ್ ಪೆಟ್ರೋಲ್ 25 -27 ಪೈಸೆಯಷ್ಟು, ಡೀಸೆಲ್ 33 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 91.8 ರೂಪಾಯಿ ಆಗಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 100 ರೂಪಾಯಿ ಸಮೀಪಕ್ಕೆ ಬಂದಿದೆ. ಮಂಗಳವಾರ ಮುಂಬೈನಲ್ಲಿ 98.12 ರೂಪಾಯಿಗಳಾಗಿದ್ದು, ಕೊಲ್ಕತ್ತಾದಲ್ಲಿ 91.92 ರೂ., ಚೆನ್ನೈನಲ್ಲಿ 93.62 ರೂ. ದರ ಇದೆ.
ಕಳೆದ ಎರಡು ದಿನದಲ್ಲಿ ಡೀಸೆಲ್ ಬೆಲೆ ಕೂಡ ಏರಿಕೆ ಕಂಡಿದೆ. ದೆಹಲಿಯಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 82.36 ರೂ., ಮುಂಬೈನಲ್ಲಿ 89.48 ರೂ., ಕೊಲ್ಕೊತ್ತಾ 85.20 ರೂ., ಚೆನ್ನೈ 87.25 ರೂ. ಇದೆ.
18 ದಿನಗಳ ನಂತರ ಮೇ 4 ರಂದು ಇಂಧನ ಬೆಲೆ ಏರಿಕೆ ಮಾಡಲಾಗಿದ್ದು, ಕಳೆದ 8 ದಿನದಲ್ಲಿ ಒಂದು ಲೀಟರ್ ಪೆಟ್ರೋಲ್ 1.41 ರೂ., ಡೀಸೆಲ್ 1.68 ರೂಪಾಯಿ ಏರಿಕೆಯಾಗಿದೆ. ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್ ಚಿಲ್ಲರೆ ಮಾರಾಟದ ಬೆಲೆ ಮೇಲೆ ಶೇಕಡ 60, ಡೀಸೆಲ್ ಮೇಲೆ ಶೇಕಡ 54 ರಷ್ಟು ತೆರಿಗೆಹಾಕುತ್ತವೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 32.90 ರೂ. ಮತ್ತು ಡೀಸೆಲ್ ಮೇಲೆ 31.80 ರೂ. ಕೇಂದ್ರ ಸರ್ಕಾರದ ಅಬಕಾರಿ ಸುಂಕ ಇದೆ.