ನವದೆಹಲಿ: ಸೋಮವಾರದ ವಿರಾಮದ ನಂತರ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ.
ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 23 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 25 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಮಂಗಳವಾರ ರಾಷ್ಟ್ರರಾಜಧಾನಿಯಲ್ಲಿ ಡೀಸೆಲ್ ದರ 84 ರೂಪಾಯಿ ದಾಟಿದೆ. ದರ ಪರಿಷ್ಕರಣೆಯ ನಂತರ ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 100 ರೂಪಾಯಿಗೆ ತಲುಪಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ದರ ಪರಿಷ್ಕರಣೆ ಮಾಡಿದ್ದು, ಪೆಟ್ರೋಲ್ ಗೆ 23 ಪೈಸೆ, ಡಿಸೆಲ್ ಗೆ 25 ಪೈಸೆ ಹೆಚ್ಚಳ ಮಾಡಿವೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದ್ದು, ಮುಂಬೈನಲ್ಲಿ ಇಂದು ಒಂದು ಲೀಟರ್ ಪೆಟ್ರೋಲ್ ಗೆ 99.71 ರೂಪಾಯಿ ಇದೆ. ಡೀಸೆಲ್ ದರ 91.57 ರೂ. ಇದೆ.