ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಮೂರನೇ ದಿನವೂ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದು, ಡೀಸೆಲ್ ಬೆಲೆಯನ್ನು ಲೀಟರಿಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ.
ರಾಷ್ಟ್ರರಾಜಧಾನಿಯಲ್ಲಿ ದರ ಪರಿಷ್ಕರಣೆ ನಂತರ ಒಂದು ಲೀಟರ್ ಪೆಟ್ರೋಲ್ 90.99 ರೂ. ಡೀಸೆಲ್ 81.42 ರೂಪಾಯಿ ಇದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ಗೆ
ಮುಂಬೈನಲ್ಲಿ 97.34 ರೂ., 88.49 ರೂ.
ಚೆನ್ನೈನಲ್ಲಿ 92.90 ರೂ., 86.35 ರೂ.
ಕೊಲ್ಕತ್ತಾದಲ್ಲಿ 91.14 ರೂ., 84.26 ರೂ.