ಪೆಟ್ರೋಲ್, ಡೀಸೆಲ್ ಬೆಲೆ ಇಂದು ಕೂಡ ಏರಿಕೆಯಾಗಿದೆ. 15 ದಿನಗಳಲ್ಲಿ 13 ನೇ ಬಾರಿ ಹೆಚ್ಚಳವಾಗಿದ್ದು, ಲೀಟರ್ ಗೆ 9.20 ರೂ.ನಷ್ಟು ಏರಿಕೆ ಕಂಡಿದೆ.
ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ ಎರಡು ವಾರಗಳಲ್ಲಿ ಲೀಟರ್ ಗೆ 9.20 ರೂ. ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಈ ಹಿಂದೆ 103.81 ರೂ.ನಿಂದ 104.61 ರೂ., ಹಾಗೂ ಡೀಸೆಲ್ ದರ.95.07 ರೂ.ನಿಂದ 95.87 ರೂ. ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 84 ಪೈಸೆ ಮತ್ತು 85 ಪೈಸೆ ಏರಿಕೆಯಾಗಿದೆ. ದರ ಹೆಚ್ಚಳದೊಂದಿಗೆ, ಮುಂಬೈನಲ್ಲಿ ಪೆಟ್ರೋಲ್ ಬೆಲೆ ಈಗ 119.67 ರೂಪಾಯಿ ಆಗಿದ್ದರೆ, ಡೀಸೆಲ್ 103.92 ರೂಪಾಯಿಗೆ ಮಾರಾಟವಾಗಲಿದೆ.
ದೇಶಾದ್ಯಂತ ದರಗಳು ಏರಿಕೆಯಾಗಿದ್ದು, ಸ್ಥಳೀಯ ತೆರಿಗೆ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮ ಅಂತ್ಯಗೊಂಡ ನಂತರ ಬೆಲೆಯಲ್ಲಿ ಇದು 13 ನೇ ಹೆಚ್ಚಳವಾಗಿದೆ.