ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಸತತ 6 ನೇ ದಿನವೂ ಇಂಧನ ಬೆಲೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ 110 ರೂ. ಗಡಿ ದಾಟಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ 35 ಪೈಸೆ ಹೆಚ್ಚಿಸಲಾಗಿದೆ.
ಬೆಲೆ ಏರಿಕೆಯ ಸತತ 6ನೇ ದಿನ ಇಂಧನ ದರ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ತನ್ನ ಅತ್ಯಧಿಕ ಮಟ್ಟವಾದ 104.14 ರೂ.ಗೆ ಮತ್ತು ಮುಂಬೈನಲ್ಲಿ ಪ್ರತಿ ಲೀಟರ್‌ಗೆ 110.12 ರೂ.ಗೆ ಏರಿದೆ. ಮುಂಬೈನಲ್ಲಿ, ಡೀಸೆಲ್ ಈಗ ಲೀಟರ್‌ಗೆ 100.66 ರೂ.ಗೆ ತಲುಪಿದೆ.
ಸ್ಥಳೀಯ ತೆರಿಗೆಗಳ ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಸುಮಾರು 72 ಡಾಲರ್ ಇತ್ತು. ಈಗ ಪ್ರತಿ ಬ್ಯಾರೆಲ್‌ಗೆ 82 ಡಾಲರ್‌ಗಳಷ್ಟು ಏರಿದೆ. ಇದರೊಂದಿಗೆ ಡೀಸೆಲ್ ದರ ಪ್ರತಿ ಲೀಟರ್‌ಗೆ 3.85 ಪೈಸೆ ಮತ್ತು ಪೆಟ್ರೋಲ್ ಬೆಲೆ 2.65 ರೂ. ಹೆಚ್ಚಾಗಿದೆ.
ಜುಲೈ/ಆಗಸ್ಟ್ ನಲ್ಲಿ ಬೆಲೆ ಕಡಿತದ ಮೊದಲು, ಮೇ 4 ಮತ್ತು ಜುಲೈ 17 ರ ನಡುವೆ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 11.44 ರೂ. ಹೆಚ್ಚಿಸಲಾಗಿತ್ತು. ಈ ಅವಧಿಯಲ್ಲಿ ಡೀಸೆಲ್ ದರವು 9.14 ರೂ. ಏರಿಕೆಯಾಗಿದೆ.