ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇವತ್ತು ಕೂಡ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿದ ನಂತರ ಪೆಟ್ರೋಲ್ ಬೆಲೆ ಲೀಟರ್ಗೆ 28 ರಿಂದ 29 ಪೈಸೆಯಷ್ಟು ಹೆಚ್ಚಳ ಮಾಡಿದ್ದು, ಡೀಸೆಲ್ ಬೆಲೆಯನ್ನು 24 ರಿಂದ 28 ಪೈಸೆಯಷ್ಟು ಏರಿಕೆ ಮಾಡಲಾಗಿದೆ.
ಮುಂಬೈನಲ್ಲಿ 100 ರೂಪಾಯಿ ಗಡಿದಾಟಿದ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 100.47 ರೂ ಇದೆ. ಡೀಸೆಲ್ ದರ 92.45 ರೂ. ಇದೆ.
ದೆಹಲಿಯಲ್ಲಿ ಪೆಟ್ರೋಲ್ ದರ 94.23 ರೂ., ಡೀಸೆಲ್ ದರ 85.15 ರೂ ಇದೆ. ಕೊಲ್ಕತ್ತಾದಲ್ಲಿ ಡೀಸೆಲ್ ದರ 88 ರೂ., ಪೆಟ್ರೋಲ್ ದರ 94.25 ರೂ. ಇದೆ. ಚೆನ್ನೈನಲ್ಲಿ ಡೀಸೆಲ್ ದರ 89.99 ರೂ., ಪೆಟ್ರೋಲ್ ದರ 95.76 ರೂ. ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ವ್ಯಾಟ್, ಸ್ಥಳೀಯ ಮಾರಾಟ ಇತರೆ ತೆರಿಗೆ ಇತರೆ ವೆಚ್ಚಗಳು ಸೇರಿ ಬೆಲೆ ದ್ವಿಗುಣಗೊಳ್ಳುತ್ತದೆ.