ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 90 ರೂ. ಗಡಿ ದಾಟಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 86.51 ರೂ. ಇದೆ. ಗ್ರಾಹಕರು ಖರೀದಿಸುವ ಪೆಟ್ರೋಲ್ ದರದಲ್ಲಿ ತೆರಿಗೆ ಮೊತ್ತವೇವೆ 54 ರೂಪಾಯಿಯಷ್ಟು ಇದೆ. ಒಂದು ಲೀಟರ್ ಪೆಟ್ರೋಲ್ ದರ ವಾಸ್ತವವಾಗಿ 31.78 ರೂ. ಇದೆ. ಡೀಸೆಲ್ ಮೂಲ ದರ 32.98 ರೂಪಾಯಿ ಇದೆ.
ವಾಸ್ತವವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಷ್ಟು ಕಡಿಮೆ ಇದ್ದರೂ, ತೆರಿಗೆ ಮೊತ್ತವೇ ಭಾರಿ ಹೆಚ್ಚಾಗಿದೆ. ಪೆಟ್ರೋಲ್ ಮೂಲ ದರ ಲೀಟರ್ಗೆ 31.78 ಇದ್ದರೂ ಮಾರಾಟ ದರ 86.51 ರೂಪಾಯಿ ಇದೆ. ಅದೇ ರೀತಿ ಡೀಸೆಲ್ ದರ 32.98 ರೂಪಾಯಿ ಇದ್ದರೂ ಮಾರಾಟ ದರ 78.31 ರೂ. ಇದೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಸೇಲ್ಸ್ ಟ್ಯಾಕ್ಸ್, ವ್ಯಾಟ್ ಕೇಂದ್ರೀಯ ತೆರಿಗೆಗಳನ್ನು ವಿಧಿಸುವುದರಿಂದ ದರ ಹೆಚ್ಚಾಗುತ್ತದೆ. ಕಚ್ಚಾತೈಲದ ಬೆಲೆ ಏರಿಳಿತವಾಗುವುದಕ್ಕಿಂತ ಹೆಚ್ಚಾಗಿ ತೆರಿಗೆ ಹೊರೆಯೇ ಜಾಸ್ತಿಯಾಗಿದೆ. ಆದಾಯ ಸಂಗ್ರಹಕ್ಕೆ ಅನೇಕ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ವಿಧಿಸುತ್ತವೆ ಎನ್ನಲಾಗಿದೆ.