ನವದೆಹಲಿ: ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿದೆ. ನಿಯಂತ್ರಣ ತಪ್ಪಿದ ತೈಲ ಬೆಲೆ ಐದು ದಿನಗಳಲ್ಲಿ ಲೀಟರ್‌ಗೆ 3.20 ರೂ. ಹೆಚ್ಚಳವಾಗಿದೆ.
ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ ಲೀಟರ್‌ಗೆ 98.61 ಮತ್ತು ಲೀಟರ್‌ಗೆ 89.87 ರೂ ಇದೆ.
ಮುಂಬೈನಲ್ಲಿ, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 113.35 ರೂ. ಮತ್ತು 97.55 ರೂ. (ಕ್ರಮವಾಗಿ 84 ಪೈಸೆ ಮತ್ತು 85 ಪೈಸೆ ಹೆಚ್ಚಾಗಿದೆ).