
ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಜೊತೆಗೆ ಚಿನ್ನ, ಬೆಳ್ಳಿ ದರ ಕೂಡ ದುಬಾರಿಯಾಗಿದೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜೊತೆಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ. ಮಂಗಳವಾರ ಪೆಟ್ರೋಲ್ ಲೀಟರ್ ಗೆ 25 ಪೈಸೆ, ಡೀಸೆಲ್ ಲೀಟರ್ ಗೆ 35 ಪೈಸೆಯಷ್ಟು ಹೆಚ್ಚಳವಾಗಿದೆ.
ಅದೇ ರೀತಿ ನವದೆಹಲಿಯಲ್ಲಿ ಅಪರಂಜಿ ಚಿನ್ನದ ದರ 10 ಗ್ರಾಂಗೆ 337 ರೂಪಾಯಿ ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿಗೆ 1149 ರೂಪಾಯಿ ಏರಿಕೆಯಾಗಿದ್ದು 69,667 ರೂಪಾಯಿಗೆ ತಲುಪಿದೆ.