ನವದೆಹಲಿ: ಸತತ 19ನೇ ದಿನ ತೈಲ ಬೆಲೆ ಪರಿಷ್ಕರಣೆಯಾಗಿ ಬೆಲೆ ಏರಿಕೆ ಮಾಡಲಾಗಿದೆ. ನಿನ್ನೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಡೀಸೆಲ್ ಬೆಲೆ 48 ಪೈಸೆ ಹೆಚ್ಚಳವಾಗಿತ್ತು.
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 80 ರೂ. ಗಡಿ ದಾಟಿದೆ. ಡೀಸೆಲ್ ಲೀಟರ್ ಗೆ 14 ಪೈಸೆ ಜಾಸ್ತಿಯಾಗಿದ್ದು 80.02 ರೂ ಆಗಿದೆ. ಪೆಟ್ರೋಲ್ 16 ಪೈಸೆ ಜಾಸ್ತಿಯಾಗಿದ್ದು, ಲೀಟರ್ ಗೆ 79.92 ರೂ. ಆಗಿದೆ.
ದೇಶಾದ್ಯಂತ ದರ ಹೆಚ್ಚಳ ಆಗಿದ್ದು ಸ್ಥಳೀಯ ಮಾರಾಟ ತೆರಿಗೆ, ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.