ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿರುವಂತೆಯೇ ಖಾಸಗಿ ಬ್ಯಾಂಕುಗಳಲ್ಲಿಯೂ ಕೂಡ ಇಂಧನ ದರ ಏರಿಕೆಯಾಗತೊಡಗಿದೆ.
ಶೆಲ್ ಬಂಕ್ ಗಳಲ್ಲಿ ವಿ ಪವರ್ ಪೆಟ್ರೋಲ್ ಲೀಟರ್ ಗೆ 99.55 ರೂ. ಇದೆ. ಸಾಮಾನ್ಯ ಪೆಟ್ರೋಲ್ ಲೀಟರ್ ಗೆ 92 ರೂಪಾಯಿ ಇದೆ. ಅದೇ ರೀತಿ ವಿ ಪವರ್ ಡೀಸೆಲ್ ದರ 88.50 ರೂ., ಸಾಮಾನ್ಯ ಡೀಸೆಲ್ ಲೀಟರ್ ಗೆ 79.50 ರೂಪಾಯಿ ದರ ಇದೆ.
ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳ ದರಗಳಿಗಿಂತ ಶೆಲ್ ಬಂಕ್ ಗಳಲ್ಲಿ ದರ ಹೆಚ್ಚಾಗಿದೆ. ವಿ ಪವರ್ ಪೆಟ್ರೋಲ್ ದರ 13.04 ರೂಪಾಯಿ, ಸಾಮಾನ್ಯ ಪೆಟ್ರೋಲ್ 5.49 ರೂಪಾಯಿ ಹೆಚ್ಚಾಗಿದೆ ಎಂದು ಹೇಳಲಾಗಿದೆ.