ನವದೆಹಲಿ: ದೇಶದಲ್ಲಿ ದಿನೇದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 35 ಪೈಸೆಯಷ್ಟು ಹೆಚ್ಚಳವಾಗಿದೆ.
ಪೈಸೆಗಳ ಲೆಕ್ಕದಲ್ಲಿ ಏರಿಕೆಯಾದ ಪೆಟ್ರೋಲ್ ದರ ಬೆಂಗಳೂರಿನಲ್ಲಿ 112.06 ರೂ., ಡೀಸೆಲ್ ದರ 102.98 ರೂ.
ಮುಂಬೈ ಪೆಟ್ರೋಲ್ 114.47 ರೂ., ಡೀಸೆಲ್ 105.49 ರೂ.,
ಕೊಲ್ಕತ್ತಾ ಪೆಟ್ರೋಲ್ 109.02 ರೂ., ಡೀಸೆಲ್ 100.49 ರೂ.
ಚೆನ್ನೈ ಪೆಟ್ರೋಲ್ 105.43 ರೂ., ಡೀಸೆಲ್ 101.59 ರೂ. ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದೆ. ದಿನೇ ದಿನೇ ದರ ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.