ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಕಚ್ಚಾ ತೈಲ ದರ 80 ಡಾಲರ್ ಗೆ ಜಿಗಿದಿದೆ. ಇದರಿಂದಾಗಿ ಈಗಾಗಲೇ ಬೆಲೆ ಏರಿಕೆಯಲ್ಲಿ ದಾಖಲೆ ಬರೆದಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇನ್ನಷ್ಟು ದುಬಾರಿಯಾಗಲಿದೆ.
ಕಚ್ಚಾ ತೈಲ ದರ ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿದೆ. ಕೊರೋನಾ ನಿರ್ಬಂಧ ಸಡಿಲವಾದ ನಂತರ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೇಡಿಕೆ ಹೆಚ್ಚಾಗಿದೆ. ತೈಲ, ಅನಿಲ, ಕಲ್ಲಿದ್ದಲು ಪೂರೈಕೆಯಲ್ಲಿ ಜಾಗತಿಕ ಬಿಕ್ಕಟ್ಟು ಉಂಟಾಗಿದೆ. ಅಮೆರಿಕದಲ್ಲಿ ಚಂಡಮಾರುತಗಳ ಕಾರಣದಿಂದ ತೈಲೋತ್ಪಾದನೆಗೆ ಅಡಚಣೆಯಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇವೆಲ್ಲ ಕಾರಣದಿಂದ ಕಚ್ಚಾತೈಲ ದರ ಜಾಸ್ತಿಯಾಗಿದೆ.
ಭಾರತ ಶೇಕಡ 85 ರಷ್ಟು ತೈಲ ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳು ಪರಿಣಾಮ ಬೀರುತ್ತವೆ. ಹೀಗಾಗಿ ತೈಲದರ ಮತ್ತಷ್ಟು ದುಬಾರಿಯಾಗಲಿದೆ ಎನ್ನಲಾಗಿದೆ.