
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಂದು ಕೂಡ ಏರಿಕೆ ಮಾಡಲಾಗಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 18 ಪೈಸೆ, ಒಂದು ಲೀಟರ್ ಡೀಸೆಲ್ ದರವನ್ನು 31 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.
ಮೇ ತಿಂಗಳಿನಲ್ಲಿ ಬರೋಬ್ಬರಿ 14 ಬಾರಿ ದರ ಏರಿಕೆ ಮಾಡಲಾಗಿದೆ. ಇಂಧನ ದರ ಏರಿಕೆ ಮುಂದುವರೆದಿದ್ದು, ತೈಲ ಕಂಪನಿಗಳು ಇವತ್ತು ಕೂಡ ದರ ಪರಿಷ್ಕರಣೆ ಮಾಡಿವೆ. ಬೆಲೆ ಏರಿಕೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 93.68 ರೂ., ಡೀಸೆಲ್ ದರ 84.61 ರೂ. ಇದೆ.