ನವದೆಹಲಿ: ಈ ವರ್ಷ ಎರಡನೇ ಬಾರಿಗೆ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಲವೆಡೆ ಪೆಟ್ರೋಲ್ ದರ ಶುಕ್ರವಾರ ಪ್ರತಿ ಲೀಟರಿಗೆ 102 ರೂಪಾಯಿಗೆ ಏರಿಕೆಯಾಗಿದೆ.
ಲೀಟರ್ ಪೆಟ್ರೋಲ್ ಗೆ ಬೆಂಗಳೂರಿನಲ್ಲಿ 94.30 ರೂಪಾಯಿ, ಮುಂಬೈ 97.61 ರೂಪಾಯಿ, ಹೈದರಾಬಾದ್ ನಲ್ಲಿ 94.86 ರೂಪಾಯಿಗೆ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದೆ. ಚೀನಾ ಮತ್ತು ಅಮೆರಿಕದಲ್ಲಿ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಪರಿಣಾಮಕಾರಿ ತೈಲಕ್ಕೆ ಬೇಡಿಕೆ ಹೆಚ್ಚಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ದೇಶದಲ್ಲಿ ಕೊರೋನಾ ಬಿಕ್ಕಟ್ಟಿನ ಕಾರಣ ಬೇಡಿಕೆ ಕಡಿಮೆಯಾಗಿದೆ. 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಇದೇ ವೇಳೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೆಲವು ಕಡೆ ಪೆಟ್ರೋಲ್ ದರ 102 ರೂಪಾಯಿಗೆ ಏರಿಕೆಯಾಗಿದೆ.