ನವದೆಹಲಿ: ಕಚ್ಚಾತೈಲ ತರ ಒಂದು ವಾರದಲ್ಲಿ 10 ಡಾಲರ್ ನಷ್ಟು ಕುಸಿತ ಕಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ತಡೆಯುವ ಉದ್ದೇಶದಿಂದ ಭಾರತ ಸೇರಿದಂತೆ ಅನೇಕ ದೇಶಗಳು ಮೀಸಲು ತೈಲ ಬಳಕೆ ತಂತ್ರದ ಮೊರೆಹೋಗಿದ್ದು ಫಲ ನೀಡಿದೆ. ಕಚ್ಚಾತೈಲದ ದರ ಒಂದು ವಾರದಲ್ಲಿ 10 ಡಾಲರ್ ನಷ್ಟು ಕಡಿಮೆಯಾಗಿದ್ದು, ಮತ್ತಷ್ಟು ಕುಸಿತವಗಲಿದೆ. ಇದರೊಂದಿಗೆ ಉತ್ಪಾದನೆ ಹೆಚ್ಚಳ ಮಾಡಲು ಒಪೆಕ್ ರಾಷ್ಟ್ರಗಳು ಮುಂದಾಗಿವೆ. ಇದಲ್ಲದೆ ಒಮಿಕ್ರಾನ್ ನಿಂದಾಗಿ ಅನೇಕ ದೇಶಗಳಲ್ಲಿ ತೈಲ ಬೇಡಿಕೆ ಕಡಿಮೆಯಾಗುತ್ತಿದ್ದು, ಇದರಿಂದಾಗಿ ಇಂಧನ ದರ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೇರಿದ್ದರಿಂದ ಸುಂಕ ಮತ್ತು ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡಿತಗೊಳಿಸಿ ಕೊಂಚ ಹೊರೆ ತಗ್ಗಿಸಿವೆ. ಈಗ ಕಚ್ಚಾತೈಲದ ದರ ಕಡಿಮೆಯಾಗಿದ್ದರಿಂದ ಇಂಧನ ದರ ಇಳಿಕೆಯಾಗಲಿದೆ ಎನ್ನಲಾಗಿದೆ.