ನವದೆಹಲಿ: ಶತಕ ಬಾರಿಸಿ ಮುನ್ನುಗ್ಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ. ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟವಾಗಿರುವ ಒಪೆಕ್ ಮತ್ತು ಇತರೆ ದೇಶಗಳು ತೈಲ ಉತ್ಪಾದನೆಯಲ್ಲಿ ಹೆಚ್ಚಳ ಮಾಡಲು ತೀರ್ಮಾನ ಕೈಗೊಂಡಿವೆ.
ಬೇಡಿಕೆ ಹೆಚ್ಚಾಗಿದ್ದರೂ ಕೂಡ ಉತ್ಪಾದನೆ ಕಡಿತಗೊಳಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಉತ್ಪಾದನೆ ಕಡಿತಗೊಳಿಸಿದ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಜಾಸ್ತಿಯಾಗಿದ್ದು. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ತೈಲ ದರ ಏರುಗತಿಯಲ್ಲೇ ಸಾಗಿತ್ತ. ಈಗ ಉತ್ಪಾದನೆ ಹೆಚ್ಚಿಸಲು ತೀರ್ಮಾನಿಸಿರುವುದರಿಂದ ಪ್ರತಿ ಬ್ಯಾರೆಲ್ ಗೆ 73 ಡಾಲರ್ ನಷ್ಟಿರುವ ಕಚ್ಚಾ ತೈಲ ದರ ಇಳಿಕೆಯಾಗತೊಡಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗಲಿದೆ ಎನ್ನಲಾಗಿದೆ.