ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿದ್ದು, ಪೆಟ್ರೋಲ್ ದರ ಲೀಟರ್ ಗೆ 2 ರೂ. ನಷ್ಟು ಕಡಿಮೆ ಮಾಡಲು ಅವಕಾಶವಿದೆ.
ಪ್ರತಿ ಬ್ಯಾರೆಲ್ ಗೆ 70 ಡಾಲರ್ ನಿಂದ 65 ಡಾಲರ್ ಗೆ ಕಚ್ಚಾತೈಲದ ದರ ಇಳಿಕೆಯಾಗಿದೆ. ಕಳೆದ ತಿಂಗಳು ಪ್ರತಿ ಬ್ಯಾರೆಲ್ 77 ಡಾಲರ್ ಇದ್ದ ಕಚ್ಚಾತೈಲದ ತರ ಈಗ 65 ಡಾಲರ್ ಗೆ ಕುಸಿದಿದ್ದು, ದೇಶದಲ್ಲಿ ಮಾತ್ರ ಪೆಟ್ರೋಲ್ ದರ ಇಳಿಕೆ ಮಾಡಿಲ್ಲ. ಕಳೆದ 35 ದಿನಗಳಿಂದ ಪೆಟ್ರೋಲ್ ದರ ಯಥಾಸ್ಥಿತಿಯಲ್ಲಿದ್ದು, ಡೀಸೆಲ್ ದರದಲ್ಲಿ 3 ದಿನದಿಂದ 20 ರಿಂದ 25 ಪೈಸೆಯಷ್ಟು ಇಳಿಕೆ ಮಾಡಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್ ಗೆ 12 ಡಾಲರ್ ನಷ್ಟು ಇಳಿಕೆಯಾಗಿರುವುದರಿಂದ ಪೆಟ್ರೋಲ್ ದರವನ್ನು ಕೂಡ ಕಡಿಮೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದ್ದು, ಲೀಟರ್ ಗೆ 2 ರೂಪಾಯಿಯಷ್ಟು ಕಡಿಮೆ ಮಾಡಲು ಅವಕಾಶವಿದೆ ಎನ್ನಲಾಗಿದೆ.