
ನವದೆಹಲಿ: ಕಳೆದ 16 ದಿನಗಳ ಅವಧಿಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮತ್ತೆ ಜಾಸ್ತಿಯಾಗಿದೆ.
ಪೆಟ್ರೋಲ್ ಲೀಟರಿಗೆ 33 ಪೈಸೆ, ಡೀಸೆಲ್ ಲೀಟರ್ಗೆ 58 ಪೈಸೆ ಹೆಚ್ಚಳವಾಗಿದೆ. ಕಳೆದ 16 ದಿನಗಳಿಂದ ನಿರಂತರ ಬೆಲೆ ಏರಿಕೆಯಿಂದಾಗಿ ಇಂಧನ ಬೆಲೆ ಗರಿಷ್ಠ ಮಟ್ಟವನ್ನು ತಲುಪಿದೆ. ಡೀಸೆಲ್ ಲೀಟರ್ ಗೆ 9.46 ರೂ., ಪೆಟ್ರೋಲ್ ಲೀಟರ್ ಗೆ 8.30 ರೂಪಾಯಿ ಜಾಸ್ತಿಯಾಗಿದೆ.