ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಇಳಿಕೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ.
ರಾಜ್ಯದಲ್ಲಿ ಪೆಟ್ರೋಲ್ ದರ 100.63 ರೂಪಾಯಿ, ಡೀಸೆಲ್ ದರ 85.03 ರೂಪಾಯಿ ಆಗಿದೆ. ರಾಜ್ಯದಲ್ಲಿ ಪೆಟ್ರೋಲ್ ಮೇಲೆ ಒಟ್ಟಾರೆ 13.30 ರೂಪಾಯಿ ಕಡಿತವಾಗಿದೆ. ಅದೇ ರೀತಿ ಡೀಸೆಲ್ ಮೇಲೆ 19.47 ರೂಪಾಯಿ ಕಡಿತವಾಗಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಲಾಗಿದೆ.
ಕೇಂದ್ರದಿಂದ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 5 ರೂ., ಡೀಸೆಲ್ ಮೇಲೆ 10 ರೂ. ಕಡಿತ ಮಾಡಲಾಗಿದೆ. ರಾಜ್ಯ ಸರ್ಕಾರ ತಲಾ 7 ರೂ. ವ್ಯಾಟ್ ಕಡಿಮೆ ಮಾಡಿದೆ. ಹೀಗೆ ಅಬಕಾರಿ ಸುಂಕ, ವ್ಯಾಟ್ ಕಡಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದೆ.