alex Certify ಡೀಸೆಲ್ 38 ರೂ., ಪೆಟ್ರೋಲ್ 46 ರೂ.: ಮೂಲ ದರಕ್ಕಿಂತ ಕೇಂದ್ರ, ರಾಜ್ಯದ ತೆರಿಗೆಯೇ ಬಲು ಭಾರ: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೀಸೆಲ್ 38 ರೂ., ಪೆಟ್ರೋಲ್ 46 ರೂ.: ಮೂಲ ದರಕ್ಕಿಂತ ಕೇಂದ್ರ, ರಾಜ್ಯದ ತೆರಿಗೆಯೇ ಬಲು ಭಾರ: ಇಲ್ಲಿದೆ ಮಾಹಿತಿ

ನವದೆಹಲಿ: ಅಬಕಾರಿ ಸುಂಕ ಕಡಿತ ಮತ್ತು ವ್ಯಾಟ್ ಇಳಿಕೆ ಮಾಡಿದ ಕಾರಣ ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ 100 ಆಸುಪಾಸಿಗೆ ಬಂದಿದೆ.

ಕೇಂದ್ರ ಸರ್ಕಾರ ಡೀಸೆಲ್ ದರ 10 ರೂ., ಪೆಟ್ರೋಲ್ ದರವನ್ನು 5 ರೂಪಾಯಿ ಕಡಿಮೆ ಮಾಡಿದೆ. ರಾಜ್ಯ ಸರ್ಕಾರದಿಂದ ತಲಾ 7 ರೂ. ಕಡಿತಗೊಳಿಸಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಆದರೆ, ಒಂದು ಲೀಟರ್ ಪೆಟ್ರೋಲ್ ಮೂಲ ದರ 46 ರೂಪಾಯಿ ಇದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆ 64.91 ರೂಪಾಯಿ ಇದೆ. ಇದರೊಂದಿಗೆ ಡೀಲರ್ ಕಮಿಷನ್ 3 ರೂಪಾಯಿ ಸೇರಿ ಒಂದು ಲೀಟರ್ ಪೆಟ್ರೋಲ್ ದರ 113.91 ರೂ. ಆಗಲಿದೆ.

ಒಂದು ಲೀಟರ್ ಡೀಸೆಲ್ ನ ಮೂಲ ದರ 38 ರೂಪಾಯಿ ಇದ್ದು, ಕೇಂದ್ರ ಮತ್ತು ರಾಜ್ಯದ ತೆರಿಗೆಗಳು ಸೇರಿ 64.47 ರೂ. ಇದೆ. 2 ರೂ. ಡೀಲರ್ ಕಮಿಷನ್ ಸೇರಿ 104.47 ರೂ. ಆಗಲಿದೆ. ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಮೂಲ ದರಕ್ಕಿಂತ ತೆರಿಗೆಯೇ ಅಧಿಕವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...