ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ ಜನಸಾಮಾನ್ಯರನ್ನು ಹೈರಾಣವಾಗಿಸಿದೆ. ಆದ್ರೆ ದೇಶದಲ್ಲಿ ಶೀಘ್ರವೇ ತೈಲ ಬೆಲೆ ಇಳಿಯುವ ಸಾಧ್ಯತೆಯಿದೆ. ಇದಕ್ಕೆ ಪೂರಕವೆಂಬಂತೆ 2021 ರಲ್ಲಿ ಇದೇ ಮೊದಲ ಬಾರಿಗೆ ಬುಧವಾರದಂದು ಪೆಟ್ರೋಲ್ – ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ.
ಕಳೆದ 10-14 ದಿನಗಳಿಂದ ಜಾಗತಿಕ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳ ಕುಸಿತದ ಪ್ರಯೋಜನಗಳನ್ನು ಸಾರ್ವಜನಿಕರಿಗೆ ನೀಡಲು ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸಿದಾಗ ಮಾತ್ರ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾಗಲು ಸಾಧ್ಯ.
BREAKING NEWS: ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ – ರೂಲ್ಸ್ ಪಾಲಿಸದಿದ್ರೆ ಭಾರಿ ದಂಡ
ಒಎಂಸಿಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಕುಸಿತದ ಪ್ರಯೋಜನವನ್ನು ನಾಗರಿಕರಿಗೆ ನೀಡಲು ನಿರ್ಧರಿಸಿವೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ನಿಜವಾದ್ರೆ ಪೆಟ್ರೋಲ್-ಡಿಸೇಲ್ ಬೆಲೆ ಇಳಿಯಲಿದೆ. ಉತ್ಪಾದನೆ ಕಡಿತಗೊಳಿಸಲು ನಿರ್ಧರಿಸಿದ ನಂತರ ಒಪೆಕ್, ಏಪ್ರಿಲ್ ನಲ್ಲಿ ಅಂತರರಾಷ್ಟ್ರೀಯ ದರಗಳನ್ನು ಹೆಚ್ಚಿಸಲು ಪ್ರಾರಂಭಿಸಿತ್ತು.
ಆದ್ರೆ ಯುರೋಪ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ಕೊರೊನಾ ಹೆಚ್ಚಾಗ್ತಿದ್ದು, ಕಚ್ಚಾ ತೈಲ ಬೆಲೆ ಮತ್ತಷ್ಟು ಕುಸಿಯಲು ಕಾರಣವಾಗಿವೆ. ಕೊರೊನಾ ಕಾರಣದಿಂದ ಕೆಲ ಪ್ರಮುಖ ದೇಶಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಇದು ಅಂತರರಾಷ್ಟ್ರೀಯ ತೈಲ ಬೆಲೆಗಳ ಮೇಲೆ ಪ್ರಭಾವ ಬೀರಲಿದೆ. ಎಫ್ ಇಂಧನ ಬೆಲೆಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ದರಗಳನ್ನು ಆಧರಿಸಿರುವುದರಿಂದ, ದೇಶದಲ್ಲಿ ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ.
Big News: ಹೊಸ ತೈಲ ಉತ್ಪಾದಕ ರಾಷ್ಟ್ರದಿಂದ ಭಾರತಕ್ಕೆ ಬಂದಿಳಿಯಲಿದೆ ಉತ್ಪನ್ನ
ಹೆಚ್ಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೇಡಿಕೆ ಆಧರಿಸಿವೆ. ಫೆಬ್ರವರಿಯಲ್ಲಿ ಡೀಸೆಲ್ ಮಾರಾಟವು ಶೇಕಡಾ 8.5 ರಷ್ಟು ಕುಸಿದಿದ್ದರೆ, ಪೆಟ್ರೋಲ್ ಬೇಡಿಕೆ ಶೇಕಡಾ 6 ರಷ್ಟು ಕುಸಿದಿದೆ. ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಹೆಚ್ಚಳಕ್ಕೆ ಮತ್ತೊಂದು ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಧಿಸುವ ಇಂಧನ ತೆರಿಗೆ.
ಭಾರತ ಇಂಧನದ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತದೆ. ಇಂಧನದ ಬೆಲೆ ಇಳಿಕೆಯಾಗಲಿದೆ ಎನ್ನುವ ಬಗ್ಗೆ ಕೇಂದ್ರ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದ್ರೆ ಕೇಂದ್ರ ಹಾಗೂ ರಾಜ್ಯಗಳು ಒಮ್ಮತದ ನಿರ್ಧಾರ ತೆಗೆದುಕೊಂಡ್ರೆ ಬೆಲೆ ನಿಯಂತ್ರಣ ಸಾಧ್ಯವೆಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.