ನವದೆಹಲಿ: ಮೊಬೈಲ್ ಗ್ರಾಹಕರಿಗೆ ಅನಗತ್ಯ ಮೆಸೇಜ್ ಗಳಿಂದ ಉಂಟಾಗುತ್ತಿದ್ದ ಕಿರಿಕಿರಿ ಬ್ರೇಕ್ ಬೀಳಲಿದೆ. ಹೆಡ್ಡರ್ ಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಉಳಿದವುಗಳನ್ನು 60 ದಿನಗಳ ಒಳಗೆ ತೆಗೆದು ಹಾಕಲು ಟೆಲಿಕಾಂ ಆಪರೇಟರ್ ಗಳಿಗೆ ಟ್ರಾಯ್ ಆದೇಶಿಸಿದೆ.
ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜ್ ಗಳಿಂದ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಲಿದೆ. ಟೆಲಿಕಾಂ ಕಂಪನಿಗಳಿಂದ ನೀಡಲಾದ ನೋಂದಣಿಯಾದ ಬಳಿಕ ನೀಡಲಾಗುವ ವಿಶೇಷ ನಂಬರ್ ಮತ್ತು ಅಕ್ಷರ ಗುಚ್ಛಗಳು ಮತ್ತು ಮೆಸೇಜ್ ಟೆಂಪ್ಲೇಟ್ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ನೋಂದಣಿಯಾಗದ ಹೆಡ್ಡರ್ ಗಳನ್ನು 30 ದಿನಗಳೊಳಗೆ ಮತ್ತು ಮೆಸೇಜ್ ಟೆಂಪ್ಲೇಟ್ ಗಳನ್ನು 60 ದಿನಗಳ ಒಳಗೆ ತೆಗೆದುಹಾಕಲು ಸೂಚನೆ ನೀಡಲಾಗಿದೆ.
ತಾತ್ಕಾಲಿಕವಾಗಿ ನೀಡಲಾಗಿರುವ ಹೆಡ್ಡರ್ ಗಳ ಅವಧಿ ಮುಕ್ತಾಯವಾದ ನಂತರ ನಿಷ್ಕ್ರಿಯವಾಗಬೇಕು. ಜಾಹೀರಾತು ಕುರಿತ ಮೆಸೇಜ್ ಗಳು ನೋಂದಣಿಯಾಗಿಲ್ಲದ 10 ಸಂಖ್ಯೆಗಳ ಮೊಬೈಲ್ ನಂಬರ್ ನಿಂದ ಬರುವುದನ್ನು ತಪ್ಪಿಸಬೇಕೆಂದು ಟ್ರಾಯ್ ನಿಂದ ಟೆಲಿಕಾಂ ಆಪರೇಟರ್ ಗಳಿಗೆ ಸೂಚನೆ ನೀಡಲಾಗಿದೆ.
ಬೃಹತ್ ಪ್ರಚಾರ ಅಥವಾ ವಹಿವಾಟಿನ SMS ಕಳುಹಿಸುವ ವ್ಯಾಪಾರಗಳು, ಕಳುಹಿಸುವವರ ID ಗಳು ಮತ್ತು SMS ಟೆಂಪ್ಲೇಟ್‌ಗಳು ಸೇರಿದಂತೆ ತಮ್ಮ ವ್ಯವಹಾರದ ವಿವರಗಳನ್ನು ಒದಗಿಸುವ ಮೂಲಕ ದೂರಸಂಪರ್ಕ ನಿರ್ವಾಹಕರು ನಡೆಸುತ್ತಿರುವ DLT ಪ್ಲಾಟ್‌ಫಾರ್ಮ್‌ಗಳಲ್ಲಿ ನೋಂದಾಯಿಸಿಕೊಳ್ಳಬೇಕು.
DLT ಪ್ಲಾಟ್‌ಫಾರ್ಮ್‌ಗಳಲ್ಲಿ ನೋಂದಾಯಿಸದ ಎಲ್ಲಾ ಟೆಲಿಮಾರ್ಕೆಟರ್‌ಗಳಿಗೆ ಸಂದೇಶ ಟೆಂಪ್ಲೇಟ್ ಸ್ಕ್ರಬ್ಬಿಂಗ್ ಮತ್ತು ಪ್ರವೇಶ ಪೂರೈಕೆದಾರರ ನೆಟ್‌ವರ್ಕ್ ಮೂಲಕ ಸ್ವೀಕರಿಸುವವರಿಗೆ ಸಂದೇಶಗಳನ್ನು ತಲುಪಿಸುವುದನ್ನು ತಡೆಯಲು ಪ್ರವೇಶ ಪೂರೈಕೆದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಟ್ರಾಯ್ ಹೇಳಿದೆ.