ಕೊರೊನಾ ಜನರ ಆದಾಯವನ್ನು ಕಡಿಮೆ ಮಾಡಿದೆ. ಇದೇ ಕಾರಣಕ್ಕೆ ಅನೇಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಹಿಂದೇಟು ಹಾಕ್ತಿದ್ದಾರೆ. ಹೋಳಿ ಸಂದರ್ಭದಲ್ಲಿ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಒಳ್ಳೆ ಅವಕಾಶವಿದೆ. ಅನೇಕ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡ್ತಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಬಡ್ಡಿ ದರಕ್ಕೆ ಸಾಲವನ್ನು ನೀಡ್ತಿದೆ. ಎಸ್ಬಿಐ ಶೇಕಡಾ 9.60ರ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡ್ತಿದೆ. ಗ್ರಾಹಕರು 20 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಗ್ರಾಹಕರು 72089-33142 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ನಂತ್ರ ಬ್ಯಾಂಕಿನಿಂದ ಕರೆ ಬರುತ್ತದೆ. ಬ್ಯಾಂಕ್ ಕೆಲ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತದೆ. ಆದ್ರೆ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಎಟಿಎಂ ಸಂಖ್ಯೆ, ಪಿನ್ ನಂಬರ್ ಹೇಳಬೇಡಿ. SMS ಕಳುಹಿಸುವ ಮೂಲಕ ವೈಯಕ್ತಿಕ ಸಾಲದ ಬಗ್ಗೆ ಮಾಹಿತಿ ಪಡೆಯಬಹುದು.
ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕನಿಷ್ಠ 25 ಸಾವಿರ ರೂಪಾಯಿಗಳವರೆಗೆನ ವೈಯಕ್ತಿಕ ಸಾಲ ನೀಡುತ್ತದೆ. ಇದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪಿಎನ್‌ಬಿಯ ವೈಯಕ್ತಿಕ ಸಾಲವು 12 ತಿಂಗಳಿಂದ 60 ತಿಂಗಳವರೆಗೆ ಮರುಪಾವತಿ ಅವಧಿಯನ್ನು ಹೊಂದಿದೆ. ಬ್ಯಾಂಕ್ ಶೇಕಡಾ 8.95ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ.
ಇನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಗ್ಗದ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತದೆ. ಕನಿಷ್ಠ ಐದು ಲಕ್ಷ ರೂಪಾಯಿಗಳಿಂದ ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ ಪಡೆಯಬಹುದು. ಶೇಕಡಾ 8.9ರ ಬಡ್ಡಿ ದರಲ್ಲಿ ಬ್ಯಾಂಕ್ ಸಾಲ ನೀಡುತ್ತದೆ.