ಆರ್ಥಿಕ ಸಂಕಷ್ಟದಲ್ಲಿ ತಕ್ಷಣ ನೆರವಿಗೆ ಬರುವುದು ವೈಯಕ್ತಿಕ ಸಾಲ. ಇದ್ರಿಂದ ಅನೇಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿಕೊಳ್ಳಬಹುದು. ಆದ್ರೆ ವೈಯಕ್ತಿಕ ಸಾಲ ಸಿಗುವುದು ಸುಲಭವಲ್ಲ. ಉತ್ತಮ ಕ್ರೆಡಿಟ್ ಸ್ಕೋರ್ ಜೊತೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಅರ್ಜಿಯನ್ನು ಸರಿಯಾಗಿ ಓದಿ ಸರಿಯಾದ ಮಾಹಿತಿ ನೀಡಬೇಕಾಗುತ್ತದೆ.
ವೈಯಕ್ತಿಕ ಸಾಲಗಳನ್ನು ಕನಿಷ್ಟ ಆದಾಯ ಮತ್ತು ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಆಧಾರದ ಮೇಲೆ ನೀಡಲಾಗುತ್ತದೆ. ಪ್ರತಿಯೊಬ್ಬ ಸಾಲಗಾರನೂ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ವೇಳೆ ಎಲ್ಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಸ್ವಯಂ ಉದ್ಯೋಗಿ ಹಾಗೂ ಸಂಬಳ ತೆಗೆದುಕೊಳ್ಳುವ ಉದ್ಯೋಗಿಗಳ ದಾಖಲೆಗಳು ಭಿನ್ನವಾಗಿರುತ್ತವೆ.
ಗ್ರಾಹಕನ ಕ್ರೆಡಿಟ್ ಸ್ಕೋರ್, ಸಾಲ ನೀಡುವ ವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಾಲಕ್ಕೆ ಅನ್ವಯವಾಗುವ ಷರತ್ತುಗಳು ಕೂಡ ಕ್ರೆಡಿಟ್ ಸ್ಕೋರ್ ಅವಲಂಬಿಸಿರುತ್ತದೆ. ಕೆಟ್ಟ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ವೈಯಕ್ತಿಕ ಸಾಲ ಸಿಗದೆ ಹೋಗಬಹುದು. ಇಲ್ಲವೆ ಹೆಚ್ಚಿನ ಬಡ್ಡಿಗೆ ಸಾಲ ಸಿಗಬಹುದು.
ಅಸಮರ್ಪಕ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದರೆ ವೈಯಕ್ತಿಕ ಸಾಲದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಕನಿಷ್ಠ ನಿವ್ವಳ ಮಾಸಿಕ ಆದಾಯ, ಆದಾಯದ ಸ್ಥಿರತೆಯನ್ನು ಪರಿಗಣಿಸಿ ಸಾಲವನ್ನು ನೀಡಲಾಗುತ್ತದೆ. ಹಾಗಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಿ. ಹಾಗೆ ನೀವು ವೈಯಕ್ತಿಕ ಸಾಲಕ್ಕೆ ಅರ್ಹರು ಎನ್ನುವ ಕಾರಣಕ್ಕೆ ಸಾಲ ಪಡೆಯಲು ಹೋಗಬೇಡಿ. ಇಲ್ಲಿ ಕನಿಷ್ಠ ಶೇಕಡಾ 11ರಿಂದ ಗರಿಷ್ಠ ಶೇಕಡಾ 24ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂಬುದು ನೆನಪಿರಲಿ.