ನವದೆಹಲಿ: ಸಿಕ್ಕಿಂ ನಾಕು ಲಾ ಗಡಿ ಪ್ರದೇಶದಲ್ಲಿ ಚೀನಾ – ಭಾರತೀಯ ಸೈನ್ಯದೊಂದಿಗೆ ಮತ್ತೊಮ್ಮೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ಜನಪ್ರಿಯ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಪ್ ಗಳ ಮೇಲೆ ಶಾಶ್ವತ ನಿಷೇಧ ಹೇರಲು ಮೋದಿ ಸರ್ಕಾರ ಮುಂದಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟಿಕ್ ಟಾಕ್ ಸೇರಿ 59 ಆಪ್ ಗಳಿಗೆ ಶಾಶ್ವತ ನಿಷೇಧ ಹೇರಲು ನೋಟಿಸ್ ನೀಡಿದೆ. ಕಳೆದ ಜೂನ್ ಕೇಂದ್ರ ಸರ್ಕಾರ ಈ ಆಪ್ ಗಳಿಗೆ ನಿರ್ಬಂಧ ವಿಧಿಸಿತು. ನಿರ್ಬಂಧದ ನಂತರ ಗೌಪ್ಯತೆ ಮತ್ತು ಭದ್ರತಾ ಅವಶ್ಯಕತೆಗಳ ಅನುಸರಣೆಯ ಕುರಿತು ನಿಲುವು ತಿಳಿಸಲು ಈ 59 ಗಳಿಗೆ ಅವಕಾಶ ನೀಡಲಾಗಿತ್ತು. ಚೀನಾ ಗಡಿಯಲ್ಲಿ ಹೊಸದಾಗಿ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ 59 ಆಪ್ ಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಲು ನೋಟಿಸ್ ನೀಡಲಾಗಿದೆ.