ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ 187 ಕೋಟಿ ಆದಾಯ ತೆರಿಗೆ ಪಾವತಿಸಲಿದ್ದಾರೆ. ತೆರಿಗೆ ವಂಚನೆಗಾಗಿ ವಿವಿಧ ಏಜೆನ್ಸಿಗಳಿಂದ ಗ್ರಿಲ್ ಆಗಿರುವ ಕಾನ್ಪುರ ಮೂಲದ ಸುಗಂಧ ದ್ರವ್ಯದ ಬ್ಯಾರನ್ ಪಿಯೂಷ್ ಜೈನ್, ತನ್ನ ಕಡೆಯಿಂದ ಉಂಟಾದ ಆದಾಯ ತೆರಿಗೆಯ ಲೋಪದ ನಂತರ ಸಂಪೂರ್ಣ ತೆರಿಗೆ ಪಾವತಿಸಲು ಮುಂದಾಗಿದ್ದಾರೆ.
ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯು ಪಿಯೂಷ್ ಜೈನ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಜೈಲಿನಲ್ಲಿ ಪಿಯೂಷ್ ಜೈನ್ ಅವರ ವಿಚಾರಣೆ ನಡೆಸಿದ ನಂತರ, ಅವರು ಹೊಣೆಗಾರರಾಗಿರುವ ಆದಾಯ ತೆರಿಗೆಯನ್ನು ಪಾವತಿಸಲು ಮುಂದಾಗಿದ್ದಾರೆ.
ಪಿಯೂಷ್ ಜೈನ್ ಅವರಿಗೆ ಸೇರಿದ ಸ್ಥಳದಿಂದ ವಶಪಡಿಸಿಕೊಂಡ ಒಟ್ಟು ಮೊತ್ತದ ಮೇಲೆ ಆದಾಯ ತೆರಿಗೆಯು ಶೇ. 87 ರಷ್ಟು ತೆರಿಗೆ ನಿಗದಿಪಡಿಸಿದೆ. ಇದು 187 ಕೋಟಿ ರೂ.ನಷ್ಟು ಇದೆ. ಇದನ್ನು ಅವರು ಪಾವತಿಸಲಿದ್ದಾರೆ ಎನ್ನಲಾಗಿದೆ.
ತೆರಿಗೆ ಅವರ ಮನೆಯಿಂದ ಸುಮಾರು 197 ಕೋಟಿ ರೂಪಾಯಿ ನಗದು, 23 ಕೆಜಿ ಚಿನ್ನ(ಮಾರುಕಟ್ಟೆ ಮೌಲ್ಯದ ಪ್ರಕಾರ 11 ಕೋಟಿ ರೂಪಾಯಿ) ಮತ್ತು 6 ಕೋಟಿ ರೂಪಾಯಿ ಮೌಲ್ಯದ 600 ಕೆಜಿ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿತ್ತು.