ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚಿನ ತೆರಿಗೆ ಪಾವತಿಸಬೇಕು ಎಂದು ವರದಿಯೊಂದು ಹೇಳಿದೆ.
ಅಂದ ಹಾಗೆ, ಕೊರೋನಾ ಸಾಂಕ್ರಮಿಕ ರೋಗದ ಕಾರಣದಿಂದಾಗಿ ಮನೆಯಿಂದಲೇ ಕೆಲಸ ಮಾಡಲು ಅನೇಕರಿಗೆ ಅವಕಾಶ ಸಿಕ್ಕಿದೆ. ಕೆಲವರು ವರ್ಕ್ ಫ್ರಂ ಹೋಮ್ ಇಷ್ಟಪಟ್ಟರೆ, ಮತ್ತೆ ಕೆಲವರು ಕಚೇರಿಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದಾರೆ. ಕೊರೋನಾ ದೂರವಾಗಿ ಸಾಮಾನ್ಯ ಸ್ಥಿತಿಗೆ ಕೆಲಸ ಕಾರ್ಯಗಳು ಬರುವ ನಿರೀಕ್ಷೆಯಲ್ಲಿ ಬಹುತೇಕ ಉದ್ಯೋಗಿಗಳಿದ್ದಾರೆ.
ಕೊರೋನಾ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ಕಲ್ಪಿಸಿದೆ. ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿವೆ. ಮನೆಯಿಂದ ಕೆಲಸ ಮಾಡುವ ಜನರಿಗೆ ತೆರಿಗೆ ವಿಧಿಸಬೇಕೆಂದು ವರದಿಯೊಂದು ಹೇಳಿದೆ.
ಹೆಸರಾಂತ Deutsche ಬ್ಯಾಂಕಿನ ಅರ್ಥಶಾಸ್ತ್ರಜ್ಞರು ಹೇಳುವ ಪ್ರಕಾರ, ಸಿಬ್ಬಂದಿ ಮನೆಯಿಂದ ಅಥವಾ ದೂರದಿಂದ ಕೆಲಸ ಮಾಡುವ ಪ್ರತಿದಿನ ಶೇಕಡ 5 ರಷ್ಟು ತೆರಿಗೆಯನ್ನು ಪಾವತಿಸುವಂತೆ ಒತ್ತಾಯಿಸುವ ಪ್ರಸ್ತಾಪ ಮಂಡಿಸಲಾಗಿದೆ. ಉದ್ಯೋಗಿ ಕೆಲಸಕ್ಕಾಗಿ ಮನೆಯಿಂದ ಹೊರಗೆ ಕಾಲಿಡದ ಕಾರಣ ಆತನ ಪ್ರಯಾಣ ವೆಚ್ಚ ಮತ್ತು ಹೊರಗಡೆಯ ಊಟದ ಖರ್ಚು ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕಿನ ಆರ್ಥಿಕ ಸಂಶೋಧನಾ ಘಟಕದ ಪ್ರಕಾರ ಈ ರೀತಿಯ ತೆರೆಗೆ ಅನೇಕ ದೇಶಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಅಮೆರಿಕದಲ್ಲಿ ವಾರ್ಷಿಕ 49 ಬಿಲಿಯನ್, ಯುಕೆಯಲ್ಲಿ 7 ಬಿಲಿಯನ್ ಮತ್ತು ಜರ್ಮನಿಯಲ್ಲಿ 20 ಬಿಲಿಯನ್ ಡಾಲರ್ ಈ ರೀತಿ ತೆರೆಗೆ ಸಂಗ್ರಹಿಸಲಾಗುತ್ತಿದೆ.
ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಹೊಂದಿರದ ಕಡಿಮೆ ವೇತನ ಗಳಿಸುವ ಕಾರ್ಮಿಕರಿಗೆ ಫಂಡ್ ಸಬ್ಸಿಡಿಗಳಿಗೆ ಇದನ್ನು ಅನ್ವಯಿಸಬಹುದು ಎಂದು Deutsche ಬ್ಯಾಂಕಿನ ಮೂಲಭೂತ ಸಾಲ ತಂತ್ರ ಮತ್ತು ವಿಷಯಾಧಾರಿತ ಸಂಶೋಧನೆ ಜಾಗತಿಕ ವಿಭಾಗದ ಮುಖ್ಯಸ್ಥ ಜಿಮ್ ರೀಡ್ ಹೇಳಿದ್ದಾರೆ.
ಕೊರೋನಾ ನಂತರ ಮನೆಯಿಂದ ಕೆಲಸ ಮಾಡುವುದು ಸಾಮಾನ್ಯ ವಿಧಾನವಾಗಿದೆ. ಮನೆಯಿಂದ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಬಹುತೇಕ ಜನರು ಮುಖಾಮಖಿ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸಿದ್ದಾರೆ. ಆರ್ಥಿಕತೆಯ ಮೂಲಸೌಕರ್ಯಕ್ಕೆ ಕಡಿಮೆ ಕೊಡುಗೆ ನೀಡುತ್ತಿದ್ದಾರೆ. ಆದರೆ, ವೇತನದ ಪ್ರಯೋಜನ ಪಡೆಯುತ್ತಿದ್ದಾರೆ ಆರ್ಥಿಕತೆಗೆ ದೊಡ್ಡ ಸಮಸ್ಯೆಯಾಗುವ ಕಾರಣಕ್ಕೆ, ಕಡಿಮೆ ಆದಾಯದವರಿಗೆ ಆದಾಯ ಸಬ್ಸಿಡಿಗಳಿಗೆ ತೆರಿಗೆ ಹಣ ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಂದ ಹೆಚ್ಚುವರಿ ತೆರಿಗೆ ಸಂಗ್ರಹಿಸಬಹುದು ಎಂದು ಹೇಳಲಾಗಿದೆ.