ನ್ಯೂಯಾರ್ಕ್: ಕೊರೋನಾ ಸಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಮತ್ತು ಲೈಂಗಿಕ ಜೀವನ ಸ್ಥಗಿತಗೊಳಿಸಿದ್ದರಿಂದ ಕಾಂಡೋಮ್ ಮಾರಾಟ ಕುಸಿತ ಕಂಡಿತ್ತು.
ಈಗ ಜನ ಮತ್ತೆ ಸೆಕ್ಸ್ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದ ಅಮೆರಿಕದಲ್ಲಿ ಕಾಂಡೋಮ್ ಮಾರಾಟ ಹೆಚ್ಚಾಗುತ್ತಿದೆ. ಲಸಿಕೆ ಪಡೆಯುತ್ತಿರುವುದರಿಂದ ಮತ್ತು ಕೋವಿಡ್-19 ಸುರಕ್ಷಿತ ನಿರ್ಬಂಧಗಳು ಸಡಿಲಗೊಳ್ಳುತ್ತಿರುವುದರ ಕಾರಣ ಕಾಂಡೋಮ್ ತಯಾರಕರು ಹೆಚ್ಚು ಕಾಂಡೋಮ್ ಮಾರಾಟ ಹೆಚ್ಚಿನ ವಹಿವಾಟು ನಡೆಸಲು ಮುಂದಾಗಿದ್ದಾರೆ.
ಏಪ್ರಿಲ್ 18 ಕ್ಕೆ ಕೊನೆಗೊಂಡ 4 ವಾರದಲ್ಲಿ ಅಮೆರಿಕದಲ್ಲಿ ಪುರುಷರ ಕಾಂಡೊಮ್ ಮಾರಾಟ ಶೇಕಡಾ 23.4 ರಷ್ಟು ಹೆಚ್ಚಳವಾಗಿ 37 ಮಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷದ ಅವಧಿಗೆ ಹೋಲಿಸಿದರೆ, ಐ.ಆರ್.ಐ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮಾರುಕಟ್ಟೆ ಸಂಶೋಧನಾ ಸಂಸ್ಥೆ ಪಾಯಿಂಟ್ ಆಫ್ ಸೇಲ್ ಡೇಟಾವನ್ನು ನೀಡಿದೆ. ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಅಂಗಡಿಗಳು, ಕಿರಾಣಿ ಅಂಗಡಿಗಳು, ಮೆಡಿಕಲ್ ಸ್ಟೋರ್ ಗಳು ಸೇರಿದಂತೆ ಇತರೆಡೆಯ ಡೇಟಾ ಪ್ರಕಾರ 2020 ರಲ್ಲಿ ಶೇಕಡ 4.4 ರಷ್ಟು ಕುಸಿತ ಕಂಡಿತ್ತು.
ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಡುರೆಕ್ಸ್ ಕಾಂಡೋಮ್‌ಗಳ ತಯಾರಕ ರೆಕ್ಕಿಟ್ ಬೆನ್‌ಕಿಸರ್ ಶೇಕಡವಾರು ಮಾರಾಟದಲ್ಲಿ ಎರಡುಪಟ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಸಾಮಾಜಿಕ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ವಹಿವಾಟು ನಿರೀಕ್ಷೆಯಲ್ಲಿ ಇರುವುದಾಗಿ ಕಂಪನಿ ಸಿಇಒ ಲಕ್ಷ್ಮಣ ನರಸಿಂಹನ್ ಹೇಳಿದ್ದಾರೆ. ಕಳೆದ ಒಂದು ವಾರದ ಹಿಂದಿನ ಅವಧಿಗೆ ಹೋಲಿಸಿದರೆ ಕಾಂಡೋಮ್ ಮಾರಾಟ ಭಾರೀ ಹೆಚ್ಚಾಗಿದೆ. ಈ ವರ್ಷ ಹೆಚ್ಚಿನ ವಹಿವಾಟು ನಿರೀಕ್ಷಿಸಲಾಗಿದೆ.