ಪೇಟಿಎಂ ಬಳಕೆದಾರರು ಇನ್ನು ಮುಂದೆ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಇ-ವಾಲೆಟ್‌ಗೆ ಸೇರಿಸುವ ದುಡ್ಡಿನ ಮೇಲೆ 2%ನಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಒಂದು ತಿಂಗಳ ಅವಧಿಯೊಳಗೆ, ಕ್ರೆಡಿಟ್ ಕಾರ್ಡ್ ಬಳಸಿ, 10,000 ರೂ. ಗಳಿಗಿಂತ ಹೆಚ್ಚು ಮೊತ್ತವನ್ನು ಇ-ವಾಲೆಟ್‌ಗೆ ಸೇರಿಸಿದಲ್ಲಿ 2% ಪ್ರತಿ ಶತದಷ್ಟು ಶುಲ್ಕ ವಿಧಿಸಲಾಗುತ್ತದೆ ಎಂದು ಪೇಟಿಎಂ ತನ್ನ ಗ್ರಾಹಕರಿಗೆ ಸಂದೇಶದ ಕಳುಹಿಸುತ್ತಿದೆ. ಕ್ರೆಡಿಟ್ ಕಾರ್ಡ್ ವ್ಯವಹಾರಗಳ ಮೇಲೆ ಬ್ಯಾಂಕ್/ಪಾವತಿ ಜಾಲಕ್ಕೆ ನಾವು ದೊಡ್ಡ ಮೊತ್ತಗಳನ್ನು ಪಾವತಿ ಮಾಡಬೇಕಾದ ಕಾರಣ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರುವುದಾಗಿ ಪೇಟಿಎಂ ಕಾರಣ ಕೊಟ್ಟಿದೆ.
UPI ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡುವ ಮೂಲಕ ಉಚಿತವಾಗಿ ಇ-ವಾಲೆಟ್‌ಗೆ ದುಡ್ಡು ಹಾಕಬಹುದಾದ ಆಯ್ಕೆಯನ್ನು ಚೆನ್ನಾಗಿ ಬಳಸಿಕೊಳ್ಳಲು ತನ್ನ ಗ್ರಾಹಕರಿಗೆ ಪೇಟಿಎಂ ತಿಳಿಸಿದೆ.
ಇದೇ ವೇಳೆ, 200 ರೂ. ಗಳವರೆಗೆ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಇ-ವಾಲೆಟ್‌ಗೆ ದುಡ್ಡು ಹಾಕುವ ಮಂದಿಗೆ ಹೆಚ್ಚುವರಿಯಾಗಿ 2%ನಷ್ಟು ಕ್ಯಾಶ್‌ಬ್ಯಾಕ್‌ಅನ್ನು ಪೇಟಿಎಂ ತನ್ನ ಗ್ರಾಹಕರಿಗೆ ಘೋಷಿಸಿದೆ.