ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ದೇಶದಾದ್ಯಂತ ಹೆಚ್ಚಾಗ್ತಿರುವ ಕೊರೊನಾ ವೈರಸ್ ಮಧ್ಯೆಯೇ ಪೇಟಿಎಂ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಕೊರೊನಾಗೆ ಸಂಬಂಧಿಸಿದ ಎಲ್ಲಾ ಸಾಲಗಳಿಗೆ ಯಾವುದೇ ವಹಿವಾಟು ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ದೇಶದ ಎಲ್ಲಾ ನೋಂದಾಯಿತ ಎನ್‌ಜಿಒಗಳು ವಹಿವಾಟಿನ ಮೇಲೆ ಶೇಕಡಾ 0 ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.
ಕಂಪನಿ ಪೇಟಿಎಂ ಪಾವತಿ ಗೇಟ್‌ವೇ ಸೇವೆಯಲ್ಲಿ ಇದನ್ನು ನೀಡ್ತಿದೆ. ಇದ್ರಿಂದಾಗಿ ಗ್ರಾಹಕರ ಕೆಲಸ ಸುಲಭವಾಗಲಿದೆ. ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಸಹಾಯ ಮಾಡುತ್ತಿರುವ ನೋಂದಾಯಿತ ಎನ್‌ಜಿಒಗಳಿಗೆ ಪಾವತಿ ಗೇಟ್‌ವೇ ಸೇವೆಯನ್ನು ಒದಗಿಸುತ್ತಿದೆ ಎಂದು ಕಂಪನಿ ತಿಳಿಸಿದೆ.
ಈ ಆ್ಯಪ್ ಮೂಲಕ ವಿದ್ಯುತ್, ನೀರು ಮತ್ತು ಮೊಬೈಲ್ ಬಿಲ್‌ಗಳನ್ನು ಆನ್‌ಲೈನ್‌ನಲ್ಲಿ ಪಾವತಿಸಿದರೆ, ಇದನ್ನು ಗೇಟ್‌ವೇ ಮೂಲಕ ಮಾಡಲಾಗುತ್ತದೆ. ಕಾರ್ಡ್ ವಿವರಗಳನ್ನು ತುಂಬಲು ಗೇಟ್‌ವೇ ಬಳಸಲಾಗುತ್ತದೆ. ಇದ್ರಿಂದಾಗಿ ಆನ್‌ಲೈನ್ ಪಾವತಿ ಪ್ರಕ್ರಿಯೆ ಸುಲಭವಾಗುತ್ತದೆ.
ಇದಲ್ಲದೆ ಪೇಟಿಎಂ Paytm Vaccine Slot Finder ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.