ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಪ್ರಸಿದ್ಧಿ ಪಡೆಯುತ್ತಿದೆ. ಕಿರಾಣಿ ಅಂಗಡಿಯಲ್ಲಿ ಸರಕು ಖರೀದಿಯಿಂದ ಹಿಡಿದು, ನೀರು ಮತ್ತು ವಿದ್ಯುತ್ ಬಿಲ್ ಪಾವತಿ, ಗ್ಯಾಸ್ ಸಿಲಿಂಡರ್ ಬುಕ್, ಮೊಬೈಲ್ ರೀಚಾರ್ಜ್ ಸೇರಿದಂತೆ ಎಲ್ಲ ಬಿಲ್ ಗಳ ಪಾವತಿ ಆನ್ಲೈನ್ ನಲ್ಲಿ ನಡೆಯುತ್ತದೆ. ಜನರು ಗೂಗಲ್ ಪೇ, ಫೋನ್ ಪೇ ಸೇರಿದಂತೆ ಪೇಟಿಎಂ ವಾಲೆಟ್ ಬಳಕೆ ಮಾಡ್ತಿದ್ದಾರೆ.
ದೇಶಾದ್ಯಂತ ಅತಿದೊಡ್ಡ ಡಿಜಿಟಲ್ ಪಾವತಿ ಆಯ್ಕೆಯಾಗಿ ಪೇಟಿಎಂ ಹೊರಹೊಮ್ಮಿದೆ. ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿಗಾಗಿ ಪೇಟಿಎಂ ದೊಡ್ಡ ಕ್ಯಾಶ್ ಬ್ಯಾಕ್ ಘೋಷಿಸಿದೆ. ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 3 ಪೇ 300 ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ.
ಈ ಯೋಜನೆಯಡಿ ಹೊಸ ಗ್ರಾಹಕರು ಮೊದಲ ಮೂರು ರೀಚಾರ್ಜ್‌ಗಳಲ್ಲಿ 100 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಹಳೆ ಗ್ರಾಹಕರು ಪ್ರತಿ ರೀಚಾರ್ಜ್ ನಲ್ಲೂ 1000 ರೂಪಾಯಿಗಳವರೆಗೆ ಕ್ಯಾಶ್ ಬ್ಯಾಕ್ ಪಡೆಯಲಿದ್ದಾರೆ. ಇದು ಜಿಯೋ, ವೊಡಾಫೋನ್ ಐಡಿಯಾ, ಏರ್‌ಟೆಲ್, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನ ಪ್ರಿಪೇಯ್ಡ್ ರೀಚಾರ್ಜ್ ಮತ್ತು ಪೋಸ್ಟ್-ಪೇಯ್ಡ್ ಬಿಲ್ ಪಾವತಿಗೆ ಸಿಗಲಿದೆ.
ರೀಚಾರ್ಜ್ ಮತ್ತು ಬಿಲ್ ಪಾವತಿಗೆ ಕ್ಯಾಶ್ ಬ್ಯಾಕ್ ಸಿಗುವ ಜೊತೆಗೆ ಗ್ರಾಹಕರು ಕಂಪನಿಯ ಉಲ್ಲೇಖಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಗೆಲ್ಲಬಹುದು. ಪೇಟಿಎಂ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಲು ಸ್ನೇಹಿತರು ಮತ್ತು ಕುಟುಂಬದ ಸದಸ್ಯರನ್ನು ಆಹ್ವಾನಿಸಿದರೆ ಇಬ್ಬರೂ 100 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.