ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏಪ್ರಿಲ್ ಒಂದರಿಂದ ಕಡಿಮೆಯಾಗಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 10 ರೂಪಾಯಿ ಇಳಿಕೆ ಮಾಡಲಾಗಿದೆ. ಇದರ ನಂತರ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ 809 ರೂಪಾಯಿಯಾಗಿದೆ. ಆದ್ರೆ ಪೇಟಿಎಂ ಗ್ರಾಹಕರಿಗೆ 309 ರೂಪಾಯಿ ಸಿಲಿಂಡರನ್ನು ಕೇವಲ 9 ರೂಪಾಯಿಗೆ ಖರೀದಿ ಮಾಡುವ ಅವಕಾಶ ನೀಡ್ತಿದೆ.
ಪೇಟಿಎಂ ಕ್ಯಾಶ್ಬ್ಯಾಕ್ ಸೇವೆ ಶುರು ಮಾಡಿದೆ. ಪೇಟಿಎಂನಲ್ಲಿ ಸಿಲಿಂಡರ್ ಬುಕ್ ಮಾಡಿದ್ರೆ 800 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಆಫರ್ ಏಪ್ರಿಲ್ 30, 2021 ರವರೆಗೆ ಚಾಲ್ತಿಯಲ್ಲಿರಲಿದೆ. ಮಾರ್ಚ್ ನಲ್ಲಿಯೂ ಪೇಟಿಎಂ ಈ ಆಫರ್ ನೀಡಿತ್ತು. ಮೊದಲ ಬಾರಿ ಪೇಟಿಎಂನಲ್ಲಿ ಸಿಲಿಂಡರ್ ಬುಕ್ ಮಾಡುವವರಿಗೆ ಪೇಟಿಎಂ ಭರ್ಜರಿ ಕ್ಯಾಶ್ಬ್ಯಾಕ್ ನೀಡಿತ್ತು.
ಪೇಟಿಎಂ ಈ ಆಫರ್ ಲಾಭ ಪಡೆಯಬೇಕೆಂದ್ರೆ ಗ್ರಾಹಕರು ಮೊದಲು ಮೊಬೈಲ್ ನಲ್ಲಿ ಪೇಟಿಎಂ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಸಿಲಿಂಡರ್ ಬುಕ್ ಮಾಡಲು FIRSTLPG ಪ್ರೋಮೋ ಕೋಡ್ ಹಾಕಬೇಕು. ಬುಕ್ ಮಾಡಿದ 24 ಗಂಟೆಯಲ್ಲಿ ನಿಮಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಸ್ಕ್ಯಾಚ್ ಕಾರ್ಡನ್ನು ನೀವು 9 ದಿನಗಳಲ್ಲಿ ಬಳಸಬೇಕಾಗುತ್ತದೆ.