ಇ-ಕಾಮರ್ಸ್ ದಿಗ್ಗಜ ಪೇಟಿಎಂ ಮಾಲ್‌ಗೆ ದೊಡ್ಡ ಮಟ್ಟದಲ್ಲಿ ಡೇಟಾ ಬ್ರೀಚ್ ಆಗಿದ್ದು, ’ಜಾನ್ ವಿಕ್’ ಹೆಸರಿನ ಸೈಬರ್‌ಕ್ರೈಂ ಸಿಂಡಿಕೇಟ್ ಒಂದು ಕಂಪನಿಯ ಡೇಟಾಬೇಸ್‌ಗೆ ಮನಸೋಯಿಚ್ಛೆ ಅಕ್ಸೆಸ್ ಪಡೆದುಕೊಂಡಿದೆ ಎಂದು ಅಮೆರಿಕ ಮೂಲದ ಸೈಬರ್-ರಿಸ್ಕ್ ಗುಪ್ತಚರ ಸಂಸ್ಥೆ ಸೈಬಲ್ ಇಂಕ್ ತಿಳಿಸಿದೆ.
ಈ ಜಾನ್ ವಿಕ್ ಭಾರತದ ಅನೇಕ ಕಂಪನಿಗಳಿಗೆ ಕನ್ನ ಹಾಕಿದ್ದು, OTT ಪ್ಲಾಟ್‌ಫಾರಂಗಳು ಸೇರಿದಂತೆ Zee5, ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳು, ಸ್ಟಾಶ್‌ಫಿನ್, ಸುಮೋ ಪೇರೋಲ್, i2iಫಂಡಿಂಗ್ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಸೈಬರ್ ದಾಳಿ ಆಗಿದೆ.
ಪೇಟಿಎಂ ಮಾಲ್‌ನ ಜಾಲತಾಣಕ್ಕೆ ಹಿಂಬದಿ ಪ್ರವೇಶದ ಮಾರ್ಗವನ್ನು ಕಂಡುಕೊಂಡಿರುವ ಜಾನ್ ವಿಕ್, ಕಂಪನಿಯ ಡೇಟಾಬೇಸ್‌ಗೆ ಅನಿಯಮಿತವಾದ ಅಕ್ಸೆಸ್ ಪಡೆದುಕೊಂಡಿದ್ದಾರೆ. ಪೇಟಿಎಂ ಮಾಲ್‌ನ ಆಂತರಿಕ ಸಿಬ್ಬಂದಿಯೊಬ್ಬರು ಕೊಟ್ಟ ಬೆಂಬಲದಿಂದ ಈ ರೀತಿ ಆಗಿದೆ ಎಂದು ಮೂಲವೊಂದರಿಂದ ತಿಳಿದುಬಂದಿದೆ.