ಡಿಜಿಟಲ್ ಯುಗದಲ್ಲಿ ವ್ಯಾಪಾರ-ವಹಿವಾಟನ್ನು ಸರಾಗವಾಗಿಸಿದ ಪೇಟಿಎಂ, 2015 ರಲ್ಲಿ ತನ್ನ ಕ್ಯುಆರ್ ಕೋಡ್ ಅಳವಡಿಸಿಕೊಂಡ ದೇಶದ ಮೊಟ್ಟ ಮೊದಲ ಅಂಗಡಿಯ ಫೋಟೋವನ್ನು ಟ್ವೀಟ್ ಮಾಡಿದ್ದು, ಪ್ರತಿ ಕ್ರಾಂತಿಯೂ ಒಂದು ವಿನೀತವಾದ ಆರಂಭ ಹೊಂದಿರುತ್ತದೆ ಎಂದು ಉಲ್ಲೇಖಿಸಿದೆ.
ಪೇಟಿಎಂ ಒಟ್ಟು ವಹಿವಾಟಿನ ಶೇ.65 ರಷ್ಟು ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೇ ನಡೆಯುತ್ತಿದ್ದು, 5 ವರ್ಷಗಳಿಂದೀಚೆಗೆ ಲಕ್ಷಾಂತರ ಅಂಗಡಿ, ಮಳಿಗೆಗಳು ಪೇಟಿಎಂ ಕ್ಯುಆರ್ ಅಳವಡಿಸಿಕೊಂಡು ವಹಿವಾಟು ನಡೆಸುತ್ತಿವೆ. ಐದು ವರ್ಷದ ಹಿಂದೆ ಮೊದಲು ಅಳವಡಿಸಿಕೊಂಡ ಹರ್ಯಾಣ ಸ್ಟೋರ್ಸ್ ನಿಜಕ್ಕೂ ಕ್ರಾಂತಿ ಆರಂಭಿಸಿದ ಮಳಿಗೆ ಎಂದಿದೆ. ಪೇಟಿಎಂ ಕ್ಯುಆರ್ ಕೋಡ್ ಆಧಾರಿತ ವಹಿವಾಟಿಗೆ 5 ವರ್ಷ ತುಂಬಿದ ಸಂಭ್ರಮಾಚರಣೆಗೆ ಬಳಕೆದಾರರು ಶುಭಾಶಯಗಳ ಸುರಿಮಳೆಗರೆದಿದ್ದಾರೆ.