ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪ್ರಯೋಜನ ವರ್ಗಾಯಿಸಬೇಕೆಂದು ಕೇಂದ್ರ ಆಹಾರ ಸಚಿವಾಲಯ ಇತ್ತೀಚೆಗೆ ಕಂಪನಿಗಳಿಗೆ ಸೂಚನೆ ನೀಡಿದೆ.
ಇದರಂತೆ ಅಡುಗೆ ಎಣ್ಣೆ ದರ ಇಳಿಕೆಗೆ ಹಲವು ಕಂಪನಿಗಳು ಕ್ರಮ ಕೈಗೊಂಡಿವೆ. ಮದರ್ ಡೈರಿ ಕಂಪನಿ, ಅದಾನಿ ವಿಲ್ಮರ್ ಕಂಪನಿ ಅಡುಗೆ ಎಣ್ಣೆಗಳ ದರ ಕಡಿಮೆ ಮಾಡಿವೆ. ಕೇಂದ್ರದ ನಿರ್ದೇಶನದ ಮೇರೆಗೆ ಮದರ್ ಡೈರಿ ಪ್ರತಿ ಲೀಟರ್ ಗೆ 14 ರೂ.ವರೆಗೆ ಮತ್ತು ಅದಾನಿ ವಿಲ್ಮಾರ್ ಪ್ರತಿ ಲೀಟರ್‌ಗೆ 30 ರೂ. ದರ ಇಳಿಕೆ ಮಾಡಿವೆ.
ಪತಂಜಲಿ ಫುಡ್ಸ್ ಲಿಮಿಟೆಡ್ ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ದರವನ್ನು ಪ್ರತಿ ಲೀಟರ್ ಗೆ 10 ರಿಂದ 15 ರೂಪಾಯಿವರೆಗೆ ಒಂದೆರಡು ದಿನಗಳಲ್ಲಿ ಕಡಿತಗೊಳಿಸಲಿದೆ. ಈ ಬಗ್ಗೆ ಮಾಹಿತಿ ನೀಡಿದ ಪತಂಜಲಿ ಫುಡ್ಸ್ ಕಂಪನಿಯ ಸಿಇಓ ಸಂಜೀವ್ ಆಸ್ಥಾನ್ ಅಡುಗೆ ಎಣ್ಣೆ ದರ ಬೆಲೆ 10 ರಿಂದ 15 ರೂ.ವರೆಗೆ ಕಡಿತ ಮಾಡಲಿದ್ದು, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಗರಿಷ್ಠ 35 ರೂ.ವರೆಗೆ ದರ ಕಡಿತವಾದಂತೆ ಆಗಲಿದೆ ಎಂದು ಹೇಳಿದ್ದಾರೆ.