ನವದೆಹಲಿ: ದೇಶದಲ್ಲಿ ಜುಲೈ 1 ರಿಂದ ಪ್ಲಾಸ್ಟಿಕ್ ಸ್ಟ್ರಾ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರದ ಈ ನಿರ್ಧಾರವನ್ನು ಆರು ತಿಂಗಳು ಮುಂದೂಡುವಂತೆ ಪಾರ್ಲೆ ಆಗ್ರೋ ಕಂಪನಿ ಆಗ್ರಹಿಸಿದೆ.
ಪಾರ್ಲೆ ಅಗ್ರೋ ಕಂಪನಿ ಜುಲೈ 1ರಿಂದ ಪ್ಲಾಸ್ಟಿಕ್ ನಿಷೇಧಿಸುವ ನಿರ್ಧಾರವನ್ನು ಆರು ತಿಂಗಳು ಮಾಡುವಂತೆ ಒತ್ತಾಯಿಸಿದೆ. ಫ್ರೂಟಿ ಮೊದಲಾದ ಉತ್ಪನ್ನಗಳ ತಯಾರಿಕೆ ಕಂಪನಿಯಾದ ಪಾರ್ಲೆ ಆಗ್ರೋ ಪ್ಲಾಸ್ಟಿಕ್ ಸ್ಟ್ರಾ ಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಮಯ ಬೇಕಿರುವುದರಿಂದ ಪ್ಲಾಸ್ಟಿಕ್ ನಿಷೇಧಿಸಿಸುವ ನಿರ್ಧಾರವನ್ನು ಆರು ತಿಂಗಳ ಮಟ್ಟಿಗೆ ಮುಂದೂಡಬೇಕೆಂದು ಹೇಳಿದೆ.
ಕೇಂದ್ರ ಸರ್ಕಾರ ಜುಲೈ 1 ರಿಂದ ಪ್ಲಾಸ್ಟಿಕ್ ನಿಷೇಧಕ್ಕೆ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಸ್ಟ್ರಾ ಕೂಡ ನಿಷೇಧಿಸಲಾಗುವುದು ಎನ್ನಲಾಗಿದೆ.