ಬೈಕ್ ಖರೀದಿಸಲು ಪಾನ್ ಕಾರ್ಡ್ ಇಲ್ಲವೇ ಸೆಲ್ಫ್ ಡಿಕ್ಲೇರೇಶನ್ ಫಾರಂ ನಂಬರ್ 60 ಸಲ್ಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಆದೇಶ ಆಟೋಮೊಬೈಲ್ ವಲಯದಲ್ಲಿ ಆತಂಕ ಮೂಡಿಸಿದ್ದು ಗ್ರಾಮೀಣ ಜನರಿಗೂ ಸಂಕಷ್ಟ ತಂದಿಟ್ಟಿದೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶ್ರಾವಣ ಮಾಸ ಬಂದಿದೆ. ಹೊಸ ಬೈಕ್ ಖರೀದಿಸಬೇಕೆಂದುಕೊಂಡವರಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಈ ಮೊದಲು ಕಾರ್ ಸೇರಿ ದೊಡ್ಡ ವಾಹನಗಳಿಗೆ ಮಾತ್ರ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿತ್ತು. ಈಗ ವಾಹನ ನೋಂದಣಿಗೆ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ತಂತ್ರಾಂಶದಲ್ಲಿ ಪಾನ್ ಕಾರ್ಡ್ ಅಥವಾ ಫಾರಂ ನಂಬರ್ 60 ಸಲ್ಲಿಸುವ ಷರತ್ತು ಹಾಕಲಾಗಿದೆ.
ಆದಾಯ ಇಲಾಖೆ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದ ಕೃಷಿ ಮತ್ತು ಬಿಪಿಎಲ್ ಕಾರ್ಡ್ ಫಲಾನುಭವಿಗಳು ಹೊಸ ಬೈಕ್ ಖರೀದಿಸಬೇಕೆಂದುಕೊಂಡಲ್ಲಿ ಪಾನ್ ಕಾರ್ಡ್ ಕಡ್ಡಾಯಗೊಳಿಸಿರುವ ನಿಯಮ ಚಿಂತೆಗೀಡಾಗುವಂತೆ ಮಾಡಿದೆ. ಇದರಿಂದ ಡೀಲರ್ ಗಳಿಗೂ ನಷ್ಟವಾಗುತ್ತದೆ. ಈ ನಿಯಮ ಬೈಕ್ ಮಾರಾಟದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.