
ನವದೆಹಲಿ: ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡಲು ಗಡುವನ್ನು 2023ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಹಿಂದಿನ ಆದೇಶದಂತೆ 2022 ರ ಮಾರ್ಚ್ 31ರ ಗಡುವು ನೀಡಲಾಗಿತ್ತು.
ಪ್ರತಿಯೊಬ್ಬರೂ ಪಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದ್ದು, ನಾಲ್ಕನೇ ಬಾರಿಗೆ ಗಡುವು ವಿಸ್ತರಿಸಲಾಗಿದೆ. ಅಲ್ಲದೆ, ದಂಡ ಕೂಡ ಅನ್ವಯವಾಗಲಿದೆ.
2022 ರ ಏಪ್ರಿಲ್ 1 ರಿಂದ ಆಧಾರ್ ನೊಂದಿಗೆ ಜೋಡಣೆ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿವೆ. ಇದರಿಂದ ಬ್ಯಾಂಕ್ ಸೇರಿದಂತೆ ಯಾವುದೇ ಹಣಕಾಸು ವಹಿವಾಟುಗಳಲ್ಲಿ ಪಾನ್ ಸಂಖ್ಯೆ ಬಳಸಲು ಸಾಧ್ಯವಾಗುವುದಿಲ್ಲ. 2022 ರ ಏಪ್ರಿಲ್ 1 ರಿಂದ ಮೂರು ತಿಂಗಳವರೆಗೆ 500 ಶುಲ್ಕ ಪಾವತಿಸಬೇಕಾಗುತ್ತದೆ. ನಂತರ 1000 ರೂಪಾಯಿ ಕಟ್ಟಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.