ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31,2021 ಅಂದ್ರೆ ಇಂದು ಕೊನೆ ದಿನ. ಇಲ್ಲವಾದ್ರೆ ದಂಡ ಪಾವತಿ ಮಾಡಬೇಕಾಗುತ್ತದೆ. ಪಾನ್ ನಿಷ್ಕ್ರಿಯವಾಗುವ ಜೊತೆಗೆ ತೆರಿಗೆ ಪಾವತಿಗೆ ತೊಂದರೆಯಾಗಲಿದೆ. ಹಾಗಾಗಿ ಇನ್ನೂ ಪಾನ್ ಜೊತೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಇಂದೇ ಲಿಂಕ್ ಮಾಡಿ. ಈಗಾಗಲೇ ಆಧಾರ್ ಜೊತೆ ಪಾನ್ ಲಿಂಕ್ ಆಗಿದ್ದರೆ, ಇನ್ನೊಮ್ಮೆ ಅದನ್ನು ಪರೀಕ್ಷಿಸಿಕೊಳ್ಳಿ.
ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ತೆರಿಗೆದಾರರು ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಲಾಗಿನ್ ಐಡಿ, ಪಾಸ್ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ. ಸೈಟ್‌ಗೆ ಲಾಗ್ ಇನ್ ಮಾಡಿದ ನಂತರ, ಪಾಪ್ ಅಪ್ ವಿಂಡೋ ಕಾಣಿಸುತ್ತದೆ. ಅಲ್ಲಿ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಹೊಸ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮೆಲ್ಲ ಮಾಹಿತಿಯಿರುತ್ತದೆ. ಅಲ್ಲಿ ಲಿಂಕ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗಾಗಲೇ ಆಧಾರ್ ಜೊತೆ ಪಾನ್ ಲಿಂಕ್ ಆಗಿದ್ದರೆ ಪಾನ್ ಲಿಂಕ್ ಆಗಿದೆ ಎಂಬ ಸಂದೇಶ ನಿಮಗೆ ಸಿಗುತ್ತದೆ.