alex Certify ʼಆಧಾರ್ʼ ನ ಈ ಕೆಲಸ ಮಾಡಿಲ್ಲವೆಂದ್ರೆ ಬೀಳಲಿದೆ 10 ಸಾವಿರ ರೂ. ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ ನ ಈ ಕೆಲಸ ಮಾಡಿಲ್ಲವೆಂದ್ರೆ ಬೀಳಲಿದೆ 10 ಸಾವಿರ ರೂ. ದಂಡ..!

ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಇನ್ನೂ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಈಗ್ಲೇ ಮಾಡಿ. ಮಾರ್ಚ್ 31ರ ನಂತ್ರ ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಜೊತೆಗೆ ಪಾನ್ ಕಾರ್ಡ್ ಮಾನ್ಯತೆ ಕಳೆದುಕೊಳ್ಳುತ್ತದೆ.

ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲ್ಪಟ್ಟ 2021 ರ ಹಣಕಾಸು ಮಸೂದೆ, ಹೊಸ ತಿದ್ದುಪಡಿಯ ಭಾಗವಾಗಿದೆ. 2021 ರ ಈ ಹಣಕಾಸು ಮಸೂದೆಯನ್ನು ಅಂಗೀಕರಿಸುವಾಗ ಸರ್ಕಾರ ಆದಾಯ ತೆರಿಗೆ ಕಾಯ್ದೆ 1961 ರಲ್ಲಿ ಹೊಸ ವಿಭಾಗ ಸೆಕ್ಷನ್ 234 ಹೆಚ್ ಸೇರಿಸಿದೆ. ಮಾರ್ಚ್ 31ರ ನಂತ್ರವೂ ಆಧಾರ್ ಜೊತೆ ಪಾನ್ ಲಿಂಕ್ ಮಾಡದವರಿಗೆ ಈ ಸೆಕ್ಷನ್ ಅಡಿ ದಂಡ ವಿಧಿಸಲಾಗುವುದು.

ದಂಡ 1000 ರೂಪಾಯಿಗಿಂತ ಕಡಿಮೆಯಿರಲಿದೆ. ಆದ್ರೆ ನಿಗದಿತ ಸಮಯದ ನಂತ್ರವೂ ಪಾನ್, ಆಧಾರ್‌ಗೆ ಲಿಂಕ್ ಆಗದೆ ಹೋದಲ್ಲಿ ದಂಡದ ಮೊತ್ತವನ್ನು ಸರ್ಕಾರ ನಿಗದಿಪಡಿಸುತ್ತದೆ. ಅಲ್ಲದೆ ಅವ್ರ ಪಾನ್ ನಿಷ್ಕ್ರಿಯಗೊಳ್ಳಲಿದೆ. ಯಾವುದೇ ಹಣಕಾಸು ಕೆಲಸಗಳಿಗೆ ಬಳಸಲು ಸಾಧ್ಯವಿಲ್ಲ.

ಸಾವಿರ ರೂಪಾಯಿ ದಂಡ ದೊಡ್ಡದಲ್ಲ ಎನ್ನುವವರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆಯಿದೆ. ಸಾವಿರ ರೂಪಾಯಿ ದಂಡ ಕಟ್ಟುವುದು ಸುಲಭವಿರಬಹುದು. ಆದ್ರೆ ಪಾನ್ ನಿಷ್ಕ್ರಿಯವಾದ್ಮೇಲೆ ತೆರಿಗೆ ಪಾವತಿ ಸಾಧ್ಯವಾಗುವುದಿಲ್ಲ. ತೆರಿಗೆ ಪಾವತಿ ಮಾಡದೆ ಹೋದಲ್ಲಿ 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.

ಪಾನ್ ಕಾರ್ಡ್ ನಿಷ್ಕ್ರಿಯವಾದ್ರೆ ಟಿಡಿಎಸ್ ಕಡಿತಗೊಳ್ಳುತ್ತದೆ. ಐಟಿಆರ್‌ನಲ್ಲಿ ಆಧಾರ್ ಸಂಖ್ಯೆ ಹಾಗೂ ಪಾನ್ ನಂಬರ್ ನೀಡುವ ಅವಶ್ಯಕತೆಯಿದೆ. ಹಾಗಾಗಿ ಈಗ್ಲೇ ಪಾನ್ ಜೊತೆ ಆಧಾರ್ ಲಿಂಕ್ ಮಾಡಿ. ಇದಕ್ಕೆ ಈಗಾಗಲೇ ಸರ್ಕಾರ ಅನೇಕ ಸಮಯ ನೀಡಿದೆ. ಇನ್ನು ಸರ್ಕಾರ ಅವಧಿ ವಿಸ್ತರಿಸುವ ಮನಸ್ಥಿತಿಯಲ್ಲಿಲ್ಲ.

ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಸುಲಭ. ಎಸ್ಎಂಎಸ್ ಮೂಲಕ ಲಿಂಕ್ ಮಾಡಬಹುದು. 567678 ಅಥವಾ 56161 ಗೆ ಎಸ್ಎಂಎಸ್ ಕಳುಹಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...