ನವದೆಹಲಿ: ನಾಳೆ ಮೇ 26 ರಿಂದ ಬ್ಯಾಂಕ್ ಗಳಲ್ಲಿ ನಗದು ಹಿಂಪಡೆಯುವಿಕೆ ಮತ್ತು ಠೇವಣಿ ನಿಯಮಗಳು ಬದಲಾಗಲಿವೆ.
ಕೇಂದ್ರ ಸರ್ಕಾರ ಬ್ಯಾಂಕ್ ಗಳಲ್ಲಿ ನಗದು ಹಿಂಪಡೆಯಲು, ಠೇವಣಿ ಇಡಲು ಪ್ಯಾನ್, ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ನಾಗರಿಕರು ತಮ್ಮ ಪ್ಯಾನ್(ಶಾಶ್ವತ ಖಾತೆ ಸಂಖ್ಯೆ) ಅಥವಾ ಆಧಾರ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಿದೆ. ಸಹಕಾರಿ ಬ್ಯಾಂಕ್ ಗಳು ಮತ್ತು ಅಂಚೆ ಕಛೇರಿಗಳು ಸೇರಿದಂತೆ ಬ್ಯಾಂಕ್ ಖಾತೆಗಳಿಂದ 20 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅಥವಾ ಠೇವಣಿ ಮಾಡಲು ಇದು ಅನ್ವಯವಾಗಲಿದೆ.
ಈ ಹಿಂದೆ, ಒಂದೇ ದಿನದಲ್ಲಿ 50,000 ರೂ.ಗಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವ ಸಮಯದಲ್ಲಿ ಮಾತ್ರ ಪ್ಯಾನ್ ಕಾರ್ಡ್ ಅಗತ್ಯವಿತ್ತು, ಆದರೆ ನಿಯಮ 114 ಬಿ ಪ್ರಕಾರ ನಗದು ಠೇವಣಿ ಅಥವಾ ಹಿಂಪಡೆಯುವಿಕೆಗೆ ವಾರ್ಷಿಕ ಮಿತಿಯನ್ನು ಒಳಗೊಂಡಿರಲಿಲ್ಲ.