ನವದೆಹಲಿ: ಕೇಂದ್ರ ಸರ್ಕಾರ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದೆ.
ಜೂನ್ 30 ರಿಂದ ಸೆಪ್ಟೆಂಬರ್ 30ರ ವರೆಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಕೊರೋನಾ ಎರಡನೇ ಅಲೆ ಕಾರಣದಿಂದಾಗಿ ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಲಾಗಿದೆ.
ಕೋವಿಡ್ -19 ರ ಕಾರಣಕ್ಕಾಗಿ ಸರ್ಕಾರವು ಈಗಾಗಲೇ ಮೂರು ಬಾರಿ ಗಡುವು ವಿಸ್ತರಿಸಿದೆ. ಮೊದಲು ಮಾರ್ಚ್ 31, 2020 ರಿಂದ ಜೂನ್ 30, 2020 ರವರೆಗೆ, ನಂತರ ಮಾರ್ಚ್ 31, 2021, ಮತ್ತು 2021 ಜೂನ್ 30 ರವರೆಗೆ ವಿಸ್ತರಿಸಲಾಗಿತ್ತು. ಆಧಾರ್ ಜೋಡಣೆಯಾಗದ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿವೆ. ಅದನ್ನು ಸಕ್ರಿಯವಾಗಿಸಲು 1 ಸಾವಿರ ರೂ.ವರೆಗೆ ದಂಡ ಕಟ್ಟಬೇಕಿದೆ ಎನ್ನಲಾಗಿದೆ.